



ಬೆಂಗಳೂರು: ಚಂದ್ರಯಾನ-3 ಯಶಸ್ವಿ ಕಾರ್ಯಾಚರಣೆ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಅಡಿ ಇಟ್ಟ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಸಾಧನೆಯನ್ನು ಗೂಗಲ್ ವಿಶೇಷ ಆ್ಯನಿಮೇಟೆಡ್ ಸಂಭ್ರಮಿಸಿದೆ.
ಇಸ್ರೋ ಕಳುಹಿಸಿದ್ದ ವಿಕ್ರಮ್ ಲ್ಯಾಂಡರ್ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಸುತ್ತ ಪರಿಚಲನೆ ನಡೆಸುವುದು. ಬಳಿಕ, ದಕ್ಷಿಣ ಧ್ರುವದಲ್ಲಿ ಸೂಕ್ತ ಸ್ಥಳ ಗುರುತಿಸಿ ಇಳಿಯುವ ಆ್ಯನಿಮೇಟೆಡ್ ದೃಶ್ಯ ಡೂಡಲ್ ನಲ್ಲಿದೆ.
ವಿಕ್ರಮ್ ಲ್ಯಾಂಡರ್ ನಿಂದ ಹೊರಬರುವ ರೋವರ್ ಪ್ರಗ್ಯಾನ್, ಚಂದ್ರನ ಮೇಲ್ಮೀಯನ್ನು ಅನ್ವೇಷಿಸಲು ಪ್ರಾರಂಭಿಸುತ್ತಾನೆ. ಈ ಸಾಧನೆಯಿಂದ ಚಂದ್ರನು ಹರ್ಷಗೊಂಡಿದ್ದಾನೆ. ಭೂಮಿಯ ಪ್ರತಿನಿಧಿ ಎಂಬಂತೆ ರೋವರ್ ಸಹ ಚಂದ್ರನ ಜತೆ ಸಂಭ್ರಮಿಸುವ ಆ್ಯನಿಮೇಟೆಡ್ ದೃಶ್ಯವನ್ನೂ ಇದರಲ್ಲಿ ನೋಡಬಹುದಾಗಿದೆ.
ಜುಲೈ 14ರಂದು ಬಾಹ್ಯಾಕಾಶ ನೌಕೆ ಉಡಾವಣೆಯಾದ ಸಮಯದಿಂದ ಆಗಸ್ಟ್ 23ರ ಟಚ್‌ಡ್‌ನ್ ವರೆಗಿನ ಚಂದ್ರಯಾನ-3ರ ಪ್ರಯಾಣವನ್ನು ವಿವರಿಸುವ ಪುಟವನ್ನು ಸಹ ಗೂಗಲ್ ರಚಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.