



ಮುನಿಯಾಲು : ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್- ಗೋಧಾಮಕ್ಕೆ ಭಾನುವಾರ ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರವಿಚಂದ್ರನ್ ಎಸ್ ಭೇಟಿ ನೀಡಿದರು. ದೇಶಿಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳ ಅಧ್ಯಯನ ನಡೆಸಿ ಬಳಿಕ ರವಿಚಂದ್ರನ್ ಎಸ್ ದಂಪತಿಗಳು ಗೋಧಾಮದಲ್ಲಿ ಗೋಪಾಲಕೃಷ್ಣ ದೇವರು ಮತ್ತು ಗೋವಿನ ಪೂಜೆ ನೆರವೇರಿಸಿದರು.
ವಿಶಾಲವಾದ ಗೋಧಾಮದಲ್ಲಿ ಭಾರತೀಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳು, ಗೋವು ಆಧಾರಿತ ಕೃಷಿ ಪದ್ಧತಿ,ಸಾವಯವ ಕೃಷಿ ಪದ್ಧತಿಯ ಸಹಿತ ಸಮಗ್ರ ಅಧ್ಯಯನ ನಡೆಸಿದರು.ಪುರಾತನ ಶೈಲಿಯ ನಾಗದೇವರ ಬನಕ್ಕೆ ಭೇಟಿ ನೀಡಿದರು. ಮುನಿಯಾಲು ಗೋಧಾಮದಲ್ಲಿ ಅದ್ಬುತ ಅನುಭವವಾಗಿದೆ ಎಂದು ರವಿಚಂದ್ರನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮುನಿಯಾಲು ಸಂಜೀವಿನಿ ಫಾರ್ಮ್‌ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್, ಮೂಡಬಿದರೆ ಎಸ್‌ಕೆಎಫ್ ಉದ್ಯಮದ ಸಮೂಹದ ಪ್ರಜ್ವಲ್ ಆರ್ ಆಚಾರ್, ಮುನಿಯಾಲು ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್- ಗೋಧಾಮದ ಕಾರ್ಯದರ್ಶಿ ಸವಿತಾ ಆರ್. ಆಚಾರ್, ಕರ್ನಾಟಕ ಬ್ಯಾಂಕ್ ಡಿಜಿಎಂ ಹನುಮಂತಪ್ಪ ಎನ್, ಕೊಡಿಯಾಲ್ ಬೈಲ್ ಶಾಖೆಯ ಚೀಪ್ ಮ್ಯಾನೇಜರ್ ಶ್ರೀಕಾಂತ್ ಬಿ.ಎಸ್ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.