logo
WhatsApp Image 2026-04-02 at 14.46.04.jpeg
hindalco everlast.jpeg

ಅಂತರ್ ಜಿಲ್ಲಾ ಕಳ್ಳ ನ ಬಂಧನ

ಟ್ರೆಂಡಿಂಗ್
share whatsappshare facebookshare telegram
13 Oct 2021
post image

ಇತ್ತಿಚೆಗೆ ಮಂಜುನಾಥ ಕಣ್ಣಿನ ಆಸ್ಪತ್ರೆಯ ಶೆಟರ್‌ನ ಬೀಗವನ್ನು ಮುರಿದು, ಕೆಲಸ ಮಾಡುವ ತಪಾಸಣಾ ಕೊಠಡಿಯ ಡ್ರಾವರ್‌ನ ಚಿಲಕವನ್ನು ಆಯುಧದಿಂದ ಮೀಟಿ ತೆಗೆದು, ಮೇಲಿನ ಡ್ರಾವರ್‌ನಲ್ಲಿದ್ದ ರೂ,479000 ಹಣವನ್ನು ಮತ್ತು ಸಿಸಿ ಟಿವಿ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದ ಇದರ ಬಗ್ಗೆ ಕಣ್ಣಿನ ಆಸ್ಪತ್ರೆ ಯ ಡಾ. ಶಕಿಲಾ ಸಚಿನ್ ರವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು ಪ್ರಕರಣದ ತನಿಖೆ ಕೈಗೊಂಡ ಪೋಲಿಸರು ಆರೋಪಿ ಹಾಗೂ ಸ್ವತ್ತು ಪತ್ತೆಯ ಬಗ್ಗೆ ಕೃತ್ಯ ನಡೆದ ಆಸ್ಪತ್ರೆಯ ಆಸುಪಾಸಿನ ಕಟ್ಟಡ , ಮನೆ , ಅಂಗಡಿಗಳಲ್ಲಿರುವ ಸಿ.ಸಿ ಕ್ಯಾಮರಾ ಪುಟೇಜ್‌ಗಳನ್ನು ಪರಿಶೀಲನೆ ಮಾಡಿ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುರೇಶ್‌ ಪೂಜಾರಿ ಯನ್ನು ಬಂದಿಸಲಾಗಿದೆ.ಆರೋಪಿ ಮುಂಜಾನೆ 5:30 ಗಂಟೆಯ ಸುಮಾರಿಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದವನ್ನು ವಿಚಾರಣೆ ನಡೆಸಲಾಗಿತ್ತು .ಆರೋಪಿ ಈ ಹಿಂದೆ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ , ಬೆಳಗಾಂ, ಮೂಲ್ಕಿ ಗಳಲ್ಲಿ ಕಳ್ಳತನ ನಡೆಸಿದ್ದು ಇತ್ತಿಚೆಗೆ ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೋಸೈಟಿ ಯಲ್ಲಿ ನಗದು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.ಆರೋಪಿಯಿಂದ ಒಟ್ಟು ನಗದು ರೂ. 4,33,000/-, 2 ಮೋಟಾರ್‌ಸೈಕಲ್‌ಗಳು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌, ಉಡುಪಿ ರವರ ಆದೇಶದಂತೆ, ಶ್ರೀ ಕುಮಾರಚಂದ್ರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌. ಆರ್‌, ಪ್ರಸಾದ್‌ಕುಮಾರ್‌, ಎಎಸ್‌ಐ ಜಯಕರ, ಅರುಣ್‌ ಸಿಬ್ಬಂದಿಯವರಾದ ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ರವರು ಪಾಲ್ಗೊಂದ್ದರು. ಆರೋಪಿ ಸುರೇಶ್‌ ಪೂಜಾರಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.