logo
WhatsApp Image 2026-04-02 at 14.46.04.jpeg
hindalco everlast.jpeg

ಮನೆ ಬಿಟ್ಟು ಬಂದ ಕೋಲಾರದ ಯುವತಿಯ ಮೇಲೆ ಅತ್ಯಾಚಾರ: ವೇಶ್ಯಾವಾಟಿಕೆ ಮಾರಲು ಯತ್ನ: ಆರೋಪಿ ಬಂಧನ

ಟ್ರೆಂಡಿಂಗ್
share whatsappshare facebookshare telegram
13 Feb 2022
post image

ಬೆಂಗಳೂರು:

ಮನೆ ಬಿಟ್ಟು ಬಂದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿ, ನಂತರ ವೇಶ್ಯಾವಾಟಿಕೆ ಮಾರಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮನೆಯವರೊಂದಿಗೆ ಜಗಳ ಮಾಡಿಕೊಂಡು ಕೋಲಾರದಿಂದ ಯುವತಿ ಬೆಂಗಳೂರಿಗೆ ಬಂದಿದ್ದಳು. ಮೆಜೆಸ್ಟಿಕ್ ಗೆ ತಲುಪಿದ

ಯುವತಿ ಕಂಗಾಲಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತಿದ್ದಳು. ಈಕೆಯನ್ನು ಗಮನಿಸಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ನಾಗೇಶ್ ಎಂಬಾತ ಆಕೆಗೆ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ.

ಯುವತಿ ಆತನ ಮಾತು ನಂಬಿ ದೇವನಹಳ್ಳಿಯ ಆತನ ಮನೆಗೆ ಹೋಗಿದ್ದಳು. ಈ ವೇಳೆ

ಅಲ್ಲಿ ಆಕೆಯ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆಯನ್ನು ಹೆದರಿಸಿ, 10 ಸಾವಿರ ರೂಪಾಯಿಗಳಿಗೆ ವೇಶ್ಯಾವಾಟಿಕೆ ಜಾಲದೊಂದಿಗೆ ಡೀಲ್ ಕುದುರಿಸಿಕೊಂಡ ಆರೋಪಿ, ಆಕೆಯನ್ನು ಮಾರುವ ಉದ್ದೆಶದಿಂದ ದೆಹಲಿಗೆ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ.

ಇವರಿಬ್ಬರನ್ನು ನೋಡಿ ಅನುಮಾನಗೊಂಡ ವಿಮಾನ ನಿಲ್ದಾಣ ಪೊಲೀಸರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಈ ಹಿಂದೆಯೂ ಯುವತಿಯರನ್ನು ದೆಹಲಿಯಲ್ಲಿ ಮಾರಾಟ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.