



ಕಾರ್ಕಳ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರಿಂದ ನಡೆಸಲ್ಪಡುವ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ೨೦೨೨ನೇ ಮಾರ್ಚ್ ಮಾಹೆಯಲ್ಲಿ ಉಡುಪಿ ಜಿಲ್ಲೆಯ ಬೆಳಪು ಸಂಯುಕ್ತ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಚಿತ್ರಕಲಾ ಲೋಯರ್ ಹಾಗೂ ಹೈಯರ್ ಗ್ರೇಡ್ ಪರೀಕ್ಷಾ ವಿಭಾಗಗಳಲ್ಲಿ, ಕಾರ್ಕಳದ ಮಾನಸ ಕಲಾ ಶಾಲೆಗೆ ಶೇಕಡಾ ೧೦೦ ಫಲಿತಾಂಶ ಬಂದಿರುತ್ತದೆ. ಲೋಯರ್ ಮತ್ತು ಹೈಯರ್ ಗ್ರೇಡ್ ಎರಡೂ ವಿಭಾಗಗಳಲ್ಲೂ ಪರೀಕ್ಷೆ ಬರೆದ ೫ ವಿದ್ಯಾರ್ಥಿಗಳಲ್ಲಿ ೪ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲೂ ೧ ವಿದ್ಯಾರ್ಥಿ ಪ್ರಥಮ ದರ್ಜೆಯಲ್ಲೂ ಪಾಸಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ ಗಗನ್ ಪೆರ್ವಾಜೆ (೫೧೦) ಅಂಕ ಪಡೆದು ಬೆಳಪು ಪರೀಕ್ಷಾ ಕೇಂದ್ರಕ್ಕೆ ತೃತಿಯ ಸ್ಥಾನಿಯಾಗಿದ್ದಾರೆ. ಲೋಯರ್ ಗ್ರೇಡ್ ವಿಭಾಗದಲ್ಲಿ ಅನ್ನಿಕಾ (೪೭೦) ದ್ವಿತೀಯ ಸ್ಥಾನ ಹಾಗೂ ಸುದನ್ವ ಹೆಗ್ಡೆ (೪೬೮) ತೃತಿಯ ಸ್ಥಾನವನ್ನೂ ಪಡೆದುಕೊಂಡಿರುತ್ತಾರೆ. ಸತತ ೧೨ ವರ್ಷಗಳಿಂದ ಕಾರ್ಕಳ ಮಾನಸ ಕಲಾ ಶಾಲೆಗೆ ಶೇಕಡಾ ೧೦೦ ಫಲಿತಾಂಶ ಬರುತ್ತಿದ್ದು ಶೇಕಡಾ ೯೮ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಪಾಸಾಗುತ್ತಿದ್ದಾರೆ. ಮಾನಸ ಕಲಾ ಶಾಲೆಯ ಸಂಚಾಲಕ ಹಾಗೂ ಚಿತ್ರಕಲಾ ಶಿಕ್ಷಕ ಚಂದ್ರನಾಥ ಬಜಗೋಳಿಯವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿಶಿಷ್ಠ ಶ್ರೇಣಿ: ಲೋಯರ್ ಗ್ರೇಡ್: ೧. ಅನ್ನಿಕಾ (೪೭೦). ೨. ಸುದನ್ವ ಹೆಗ್ಡೆ (೪೬೮). ೩. ಎಂ. ವಿಘ್ನೇಶ್ ಪೈ (೪೬೫) ಹೈಯರ್ ಗ್ರೇಡ್: ೧. ಗಗನ್ ಪೆರ್ವಾಜೆ (೫೧೦).



ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.