



ಮಂಗಳೂರು: ಹಬ್ಬ ಆಚರಣೆಗಳು ಪ್ರಾದೇಶಿಕವಾಗಿ ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಕೆಲಸವನ್ನು ಮಾಡುತ್ತದೆ. ಅಂತೆಯೇ ನಮ್ಮೆಲ್ಲರ ಬದುಕಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಎನ್ನುವುದು ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಆ ಮೂಲಕವೇ ಜೀವನೋತ್ಸಹದಿಂದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಬಿ.ವಿ ಉಡುಪ ಅವರು ಹೇಳಿದರು.

ಅವರು ಬಸ್ರೂರು ಆದಿನಾಥೇಶ್ವರ ದೇವಸ್ಥಾನದಲ್ಲಿ ನಡೆದ ಮೂಡ್ಕೇರಿ ಮಿತ್ರ ಮಂಡಳಿ ಆಯೋಜಿಸಿದ 64ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸನ್ಮಾನಿಸಿ ಮಾತನಾಡಿದರು.
ಬಸ್ರೂರಿನಲ್ಲಿ ಹುಟ್ಟಿಬೆಳೆದು ಸಾಹಿತ್ಯ, ಸಾಂಸ್ಕೃತಿಕ, ಮಾಧ್ಯಮ, ಶಿಕ್ಷಣ, ಕಲೆ, ಕ್ರೀಡೆ, ಸಾಮಾಜಿಕ ಹೀಗೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿವೃತ್ತ ದೈಹಿಕ ಶಿಕ್ಷಕರಾದ ಶಂಕರ್ ವಿ, ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಕರುಣಾಕರ ಬಳ್ಕೂರು, ಪೇಜಾವರ ಮಠ ಆನಂದತೀರ್ಥ ವಿದ್ಯಾಲಯದ ಶಿಕ್ಷಕಿ ಸುಮ ಕಿರಣ್, ಸಾಮಾಜಿಕ ಕಾರ್ಯಕರ್ತ ಕೃಷ್ಣ ಕಳಂಜಿ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ರೆಜಿಯರ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ್ ಬಸ್ರೂರು ಅವರು ವಹಿಸಿಕೊಂಡು ಊರಿನಲ್ಲಿ ನಡೆಯುವ ಸಂಘ ಸಂಸ್ಥೆಗಳ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಕ್ರೀಯರಾಗಬೇಕು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಅಶೋಕ್.ಬಿ.ಕೆ, ಉಪಸ್ಥಿತರಿದ್ಧರು. ಸಮಿತಿಯ ಸದಸ್ಯರಾದ ಶಶಿಪ್ರಸಾದ್ಅ ವರು ಧನ್ಯವಾದ ಸಮರ್ಪಿಸಿದರು. ಸಮಿತಿಯ ಸದಸ್ಯೆ ಸಾರಿಕಾ ಅಶೋಕ್ ಕೆರೆಕಟ್ಟೆ ಅವರು ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.