



ಉಡುಪಿ : ಮುಂಬೈ ನಗರಿಯಲ್ಲಿ ಬದುಕು ನಿರ್ವಹಿಸುತ್ತಿದ್ದಾಗ ಕೆಲಸದ ನಿಮಿತ್ತ ರೈಲು ಸಂಚಾರದಲ್ಲಿ ಕಾಲುಜಾರಿ ಕಾಲು ರೈಲಿನಡಿಗೆ ಬಿದ್ದು ಒಂದು ಕಾಲನ್ನು ಕಳೆದುಕೊಂಡು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಅಸಹಕಾರದ ಬದುಕು ಕಟ್ಟಿಕೊಂಡಿದ್ದ ಜಯಪ್ರಕಾಶ್ ರವರಿಗೆ ಕೊರೋನ ಮಹಾಮಾರಿಯು ಅವರನ್ನು ಬೀದಿಗೆ ತಂದು ಉಡುಪಿಯ ಬಸ್ ನಿಲ್ದಾಣವೇ ಮನೆಯಾಗಿತ್ತು.
ಜಯಪ್ರಕಾಶ್ ರವರ ಈ ಸ್ಥಿತಿಯನ್ನು ಕಂಡು ಭಾರತೀ ಗೋಪಾಲ್ ಸ್ಯಾಕ್ಸೋಪೋನಿಸ್ಟ್ ಎಂಬ ಮಹನೀಯರು ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ KYC ಉಡುಪಿ ತಂಡವು ತಕ್ಷಣವೇ ಎಚ್ಚೆತ್ತುಕೊಂಡು ತಡರಾತ್ರಿ ಅವರನ್ನು ಸಂಪರ್ಕಿಸಿ, ವಿಚಾರಗಳನ್ನು ತಿಳಿದುಕೊಂಡು ಅವರ ಮುಂದಿನ ಆಶ್ರಯಕ್ಕಾಗಿ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಿ ಅವರ ಸಹಾಯವನ್ನು ಪಡೆದು ಆಶ್ರಮಕ್ಕೆ ಸೇರಿಸಲಾಯಿತು.
ಮುಂದಿನ ದಿನಗಳಲ್ಲಿ ಜಯಪ್ರಕಾಶ್ ರವರು ಹೊಸಬೆಳಕು ಆಶ್ರಮದಲ್ಲಿ ಸಂತೋಷವಾಗಿ ಜೀವನ ಕಳೆಯುತ್ತಿದ್ದರು. ಆದರೆ ಅವರು ತನ್ನ ಒಂದು ಕಾಲಿಗೆ ಪರ್ಯಾಯವಾಗಿ ಬಳಸುತ್ತಿದ್ದ ಕೃತಕ ಕಾಲು ಸಂಪೂರ್ಣ ಹಾಳಾಗಿ... ನಡೆಯಲಾಗದ ಪರಿಸ್ಥಿತಿಯಲ್ಲಿ ಇದ್ದಿದ್ದನ್ನು ಗಮನಿಸಿದ ಕರಾವಳಿ ಯೂತ್ ಕ್ಲಬ್ ತಂಡವು ಇದೀಗ ಮಂಗಳೂರಿನ ದಾನಿಯೊಬ್ಬರ ಸಹಾಯದಿಂದ 40,000 ರೂ ವೆಚ್ಚದಲ್ಲಿ ಹೊಸ ಕೃತಕ ಕಾಲು ನಿರ್ಮಿಸಿ ಜೋಡಣೆ ಮಾಡಿ ಕೊಟ್ಟಿದೆ ಎನ್ನಲು ಖುಷಿ ಪಡುತ್ತಿದ್ದೇವೆ.
ಜಯಪ್ರಕಾಶ್ ರವರ ಮುಂದಿನ ಜೀವನವು ಉಜ್ವಲವಾಗಲಿ ಎಂದು ಹಾರೈಸುತ್ತಾ... ಅವರ ಬದುಕಿಗೆ ಆಶ್ರಯ ನೀಡುತ್ತಿರುವ ಹೊಸಬೆಳಕು ಆಶ್ರಮ, ಮಣಿಪಾಲ ಇವರಿಗೆ ತುಂಬು ಹೃದಯದ ಧನ್ಯವಾದಗಳು. 👏 ಎಂದು ಕರಾವಳಿ ಯೂತ್ ಕ್ಲಬ್ ಪ್ರಕಟಣೆ ಯಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.