logo
WhatsApp Image 2026-04-02 at 14.46.04.jpeg
hindalco everlast.jpeg

ಅಸಾನಿ ಎಫೆಕ್ಟ್: ರಾಜ್ಯದ ಲ್ಲಿ ಮಳೆ ಸಾಧ್ಯತೆ

ಟ್ರೆಂಡಿಂಗ್
share whatsappshare facebookshare telegram
10 May 2022
post image

ಅಸಾನಿ ಚಂಡಮಾರುತ ಇಂದು ಸಂಜೆ ಆಂಧ್ರದ ಮಚಲೀಪಟ್ಟಣ ಕರಾವಳಿಗೆ ಅಪ್ಪಳಿಸಲಿದ್ದು, ಬಳಿಕ ಶಿಥಿಲಗೊಳ್ಳುವ ಸಾಧ್ಯತೆ ಕಂಡುಬಂದಿದೆ.

ಆಂಧ್ರಕ್ಕೆ ಹೆಚ್ಚಿನ ಆಘಾತ ನೀಡಲಿರುವ ಚಂಡಮಾರುತ, ಕರ್ನಾಟಕದ ಕೆಲವೆಡೆಗಳಲ್ಲಿಯೂ ತನ್ನ ಪ್ರಭಾವ ತೋರಲಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮೈಸೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಎಚ್ಚರಿಕೆ ವಹಿಸಲು ಆಡಳಿತಗಳು ಸೂಚಿಸಿವೆ. ರಾಜ್ಯದ ಉಳಿದ ಭಾಗಗಳಲ್ಲಿ ಮೋಡ ಕವಿದ ಸ್ಥಿತಿ ಮುಂದುವರಿಯಲಿದೆ. ಕರಾವಳಿಗೆ ಕಾಡದು ಅಸಾನಿ ಕಾಸರಗೋಡು, ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮೋಡ, ಅಲ್ಲಲ್ಲಿ ತುಂತುರು ಮಳೆಯ ವಾತಾವರಣ ಮುಂದುವರಿಯಲಿದೆ. ಮುಂಗಾರು ರೀತಿಯ ಮೋಡದ ಚಲನೆ ಇದ್ದರೂ ಮಳೆಯ ಸಾಧ್ಯತೆ ಮಾತ್ರ ಕಡಿಮೆ ಇರಲಿದೆ. ಮುಂದಿನ ಒಂದೆರಡು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ದಟ್ಟವಾಗಿ ಗೋಚರಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.