logo
WhatsApp Image 2026-04-02 at 14.46.04.jpeg
hindalco everlast.jpeg

ಮದರ್ ತೆರೆಸಾಸ್ ಶಿಕ್ಷಣ ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ ಆಶಿಕ್ ಎಸ್ ವಿ ಅಮೇರಿಕ "ಏರ್ ಕ್ವಾಲಿಟಿ ಕಮ್ಮ್ಯೂನಿಟಿ" ರಾಯಭಾರಿಯಾಗಿ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
27 Mar 2025
post image

ಶಂಕರನಾರಾಯಣ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮದರ್ ತೆರೆಸಾಸ್ ಪದವೀಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಆಶಿಕ್ ಎಸ್ ವಿ ಅಮೇರಿಕಾದ 'ಓಪನ್ ಎಕ್ಯೂ ಸಂಸ್ಥೆ' ಓಪನ್ ಏರ್ ಕ್ವಾಲಿಟಿ ಕಮ್ಯುನಿಟಿ ರಾಯಭಾರಿಯಾಗಿ ಆಯ್ಕೆ ಮಾಡಿದೆ ಪೂರ್ವಪ್ರಾಥಮಿಕ ದಿಂದ ಪಿ ಯು ಸಿ ವರೆಗೆ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಇವರು ಪ್ರಸ್ತುತ ಬೆಂಗಳೂರಿನ ಪಂಜುರ್ಲಿ ಲ್ಯಾಬ್ನಲ್ಲಿ ಸಿ ಇ ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಯುಗುಣಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಯುವಕರಿಗೆ ನಾಯಕತ್ವ ತರಬೇತಿ ನೀಡಲಾಗುತ್ತದೆ ವಾಯು ಗುಣಮಟ್ಟದ ದತ್ತಾಂಶವನ್ನು ಬಳಸಿಕೊಂಡು ಶುದ್ಧಹವೆ ಮತ್ತು ವಾಯು ಅಸಮತೋಲನದ ವಿರುದ್ದ ಹೋರಾಟ ನಡೆಸಲು ಮತ್ತು ಸಬಲೀಕರಣ ಗೊಳಿಸಲು ಸಂಶೋಧನೆಗಳಿಗಾಗಿ ಓಪನ್ ಎಕ್ಯೂ ಒಂದು ವರ್ಷದ ತರಬೇತಿ ನೀಡಲಿದೆ. ಆಶಿಕ್ ಎಸ್ ವಿ ಈ ಹಿಂದೆ ಪ್ರಜಾವಾಣಿ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದರು.

ಇವರಿಗೆ ದೊರೆತ ನೂತನ ಹೊಣೆಗಾರಿಕೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು, ಹಾಗೂ ಪಾಲಕರು, ಅಭಿನಂದನೆ ಸಲ್ಲಿಸಿರುತ್ತಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.