



ತಿರುವನಂತಪುರಂ: ಕೇರಳದ ನಂಬರ್ ಒನ್ ಸುದ್ದಿ ವಾಹಿನಿ ಏಷ್ಯಾ ನೆಟ್ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಬೆಳಿಗ್ಗೆ 10.30ಕ್ಕೆ ಆರಂಭವಾದ ದಾಳಿ ಸಂಜೆ 4 ಗಂಟೆ ತನಕ ಮುಂದುವರಿದಿತ್ತು ಎಂದು ವರದಿಯಾಗಿದೆ.
ಏಷ್ಯಾ ನೆಟ್ ಕೋಝಿಕೋಡ್ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಹೆಚ್ಚುವರಿ ಎಸ್ ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು ಕಚೇರಿಯಲ್ಲಿನ ಎಲ್ಲ ಕಂಪ್ಯೂಟರ್ ಗಳ ಪರಿಶೀಲನೆ ನಡೆಸಿದ್ದಾರೆ.
ಹಾರ್ಡ್ ಡಿಸ್ಕ್ ನಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾದಕ ದ್ರವ್ಯ ಪಿಡುಗಿನ ಕುರಿತಂತೆ ಏಷ್ಯಾ ನೆಟ್ ಪ್ರಸಾರ ಮಾಡಿದ ಸುದ್ದಿಯ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಸುವರ್ಣ ನ್ಯೂಸ್ ಇದೇ ಸಂಸ್ಥೆಗೆ ಸೇರಿದ ಸುದ್ದಿ ವಾಹಿನಿಯಾಗಿದೆ.
ಕೇರಳದಲ್ಲಿ ಏಷ್ಯಾ ನೆಟ್ ರಾಜಕೀಯ ವರದಿಗಾರಿಕೆಗೆ ಹೆಚ್ಚು ಖ್ಯಾತಿ ಪಡೆದಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.