



ಹೊಸದಿಲ್ಲಿ:
ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ
ಜಯಸಾಧಿಸಿ, ಸೆಮಿಫೈನಲ್ ಗೆ ತಲುಪಿದೆ.
ಪಾಕಿಸ್ತಾನವನ್ನು 3-1 ಗೋಲುಗಳ ಅಂತರದಿಂದ ಭಾರತ ಮಣಿಸಿದೆ. ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ 8 ಮತ್ತು 53ನೇ ನಿಮಿಷಗಳಲ್ಲಿ ಎರಡು ಗೋಲು, ಆಕಾಶದೀಪ್ ಸಿಂಗ್ 42ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಗೋಲುಗಳ ಡ್ರಾ ಸಾಧಿಸಿದ್ದ ಭಾರತದ ಹಾಕಿ ತಂಡ 2ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9-0 ಗೋಲುಗಳಿಂದ ಸೋಲಿಸಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.