



ಹಿಂದುತ್ವಕ್ಕೆ ಅಪಚಾರ ಮಾಡಿದ ಸುನಿಲ್ ಕುಮಾರ್ ರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿ ಹಿಂದುತ್ವ ಉಳಿಸಿ
ಕಾರ್ಕಳ : ಬೈಲೂರು ನಲ್ಲಿ ನಿರ್ಮಾಣಗೊಂಡು ಶಾಸಕ ಸುನಿಲ್ ಕುಮಾರ್ ರಿಂದ ಅಪಚಾರಕ್ಕೊಳಗಾದ ಕರಾವಳಿ ಸೃಷ್ಟಿ ಕರ್ತ ಪರಶುರಾಮರ ಹೊಸ ಮೂರ್ತಿಯನ್ನು ಸರಕಾರ ಶಾಸ್ತ್ರ ಪೂರ್ವಕವಾಗಿ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಧರ್ಮ ಉಳಿಸಲಿ ಎಂದು ಉಚ್ಚಾಟಿತ ಬಿಜೆಪಿ ನಾಯಕರಾದ ಸುಭಾಸ್ ಹೆಗ್ಡೆ ತಿಳಿಸಿದ್ದಾರೆ.
ಪರಶು ರಾಮರು ವಿಷ್ಣುವಿನ ಅವತಾರವೆತ್ತವರು. ಕಾರ್ಕಳದಲ್ಲಿ ಅಂತಹ ಪುಣ್ಯ ಪುರುಷರ ಮೂರ್ತಿ ಕಾರ್ಕಳದಲ್ಲಿ ನಿರ್ಮಾಣ ಕಂಡಾಗ ಹಿಂದೂ ಧರ್ಮದ ಎಲ್ಲರೂ ಸಂತಸ ಪಟ್ಟಿದ್ದರು.
ಎಲ್ಲಾ ಹಿಂದೂ ಸಂಘಟನೆಗಳು ಕೂಡ ಈ ವಿಚಾರ ಬಂದಾಗ ಸಂತಸ ಪಟ್ಟಿದ್ದರು. ಹೆಮ್ಮೆ ಪಟ್ಟಿದ್ದರು. ಆದರೆ ಈ ಮೂರ್ತಿಯನ್ನು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದವರು ನಕಲಿ ಮಾಡುತ್ತಾರೆ ಎಂದು ಕನಸಲ್ಲಿ ಕೂಡ ಎಣಿಸಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಶ್ವ ಗುರು ಆಗುತ್ತಿದೆ. ಇಂತಹ ಸಂತಸದ ದಿನಗಳಲ್ಲಿ ಕರಾವಳಿಯ ಸೃಷ್ಟಿ ಕರ್ತನ ಮೂರ್ತಿಯನ್ನೇ ನಕಲಿ ಮಾಡಿರುವುದು ಹಿಂದುತ್ವಕ್ಕೆ ಮಾಡಿದ ದ್ರೋಹ. ಹಿಂದುತ್ವಕ್ಕೆ ಯಾರೇ ದ್ರೋಹ ಮಾಡಿದರು ಕ್ಷಮೆ ಇಲ್ಲ. ಅದು ಭಯೋತ್ಪಾದನೆಗೆ ಸಮಾನ.
ಈ ದ್ರೋಹದಲ್ಲಿ ಸುನಿಲ್ ಕುಮಾರ್ ರವರ ನೇರ ಪಾತ್ರ ಇರುವುದರಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಉಚ್ಚಾಟಿತ ಬಿಜೆಪಿ ನಾಯಕ ಸುಭಾಶ್ಚಂದ್ರ ಹೆಗ್ಡೆ ಅಗ್ರಹಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.