



ಕ್ಯಾನ್‌ಬೆರಾ: 11ನೇ ವಯಸ್ಸಿನಲ್ಲೇ ತಿಂಗಳಿಗೆ 1.1 ಕೋಟಿ ರೂ. ದುಡಿಯುತ್ತಿದ್ದ ಆಸ್ಟ್ರೇಲಿಯಾ ಮೂಲದ ಬಾಲಕಿ ಪಿಕ್ಸಿ, ತನ್ನ ವೃತ್ತಿಯಿಂದ ಅರೆಕಾಲಿಕ ನಿವೃತ್ತಿ ಘೋಷಿಸಿದ್ದಾಳೆ.
ಕೊರೊನಾ ಸಂದರ್ಭದಲ್ಲಿ ಅಂದರೆ 3 ವರ್ಷಗಳ ಹಿಂದೆ ಗೊಂಬೆಗಳು, ಹೇರ್ ಆ್ಯಕ್ಸಸರೀಸ್‌ಗಳನ್ನು ಮಾರಾಟ ಮಾಡುವ ಹಂಬಲದಿಂದ ತಾಯಿಯ ಸಹಾಯ ಪಡೆದು, ಪಿಕ್ಸಿ ಆನ್‌ಲೈನ್ ಮಳಿಗೆ ಆರಂಭಿಸಿದ್ದಳು. ಆಕೆಯ ಉದ್ಯಮಕ್ಕೆ ಬಹುದೊಡ್ಡ ಬೇಡಿಕೆ ಸೃಷ್ಟಿಯಾಗಿದ್ದಲ್ಲದೇ, ತಿಂಗಳಿಗೆ 1.1 ಕೋಟಿ ರೂ.ವರೆಗಿನ ಆದಾಯ ಗಳಿಸುತ್ತಿದ್ದಳು. ಈಗ ತಾನು ಪ್ರೌಢಶಾಲೆಗೆ ಸೇರ್ಪಡೆಗೊಂಡಿರುವ ಹಿನ್ನೆಲೆ ಶಿಕ್ಷಣದತ್ತ ಗಮನಹರಿಸಿ, ಆನ್‌ಲೈನ್ ಮಳಿಗೆಯ ವೃತ್ತಿಯಿಂದ ಅಲ್ಪ ಸಮಯದ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದ್ದಾಳೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.