logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹಿರಿಯ ನಾಗರಿಕರ ಸುರಕ್ಷಿತ ಮತ್ತು ಜೀವನಶೈಲಿ ಒದಗಿಸುವಲ್ಲಿ ಅತುಲ್ಯಾ ಸೀನಿಯರ್ ಕೇರ್ ದಿಟ್ಟ ಹೆಜ್ಜೆ

ಟ್ರೆಂಡಿಂಗ್
share whatsappshare facebookshare telegram
27 Jan 2024
post image

ಬೆಂಗಳೂರು,: ಅತುಲ್ಯಾ ಸೀನಿಯರ್ ಕೇರ್ ಸಂಸ್ಥೆಯು ಹಿರಿಯ ನಾಗರಿಕರಿಗೆ ಸಂತಸದ ಜೀವನದ ಪರಿಹಾರಗಳನ್ನು ನೀಡುವ ವಿಚಾರದಲ್ಲಿ ಹೆಸರುವಾಸಿಯಾಗಿದೆ. ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಸಮೃದ್ಧ ಜೀವನಶೈಲಿಯನ್ನು ಒದಗಿಸುವ ತನ್ನ ಬದ್ಧತೆಯ ಮೂಲಕ ವೃದ್ಧರ ಆರೈಕೆಯ ಲ್ಯಾಂಡ್ ಸ್ಕೇಪ್ ಅನ್ನು ಮರುವ್ಯಾಖ್ಯಾನಿಸುತ್ತದೆ. ಈ ಸಂಸ್ಥೆಯ ಅಸಾಧಾರಣ ಸೇವೆಗಳು ಮತ್ತು ಅತ್ಯಾಧುನಿಕ ಮೂಲಸೌಕರ್ಯದ ಮೂಲಕ ಹಿರಿಯರ ಆರೈಕೆ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಹಿರಿಯ ಜೀವಿಗಳ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಹೊಸ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಲೇ ಬಂದಿದೆ. ಅತುಲ್ಯಾ ಸೀನಿಯರ್ ಕೇರ್ ತನ್ನಲ್ಲಿ ಆಶ್ರಯ ಪಡೆಯುವವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹಿರಿಯ ನಾಗರಿಕರ ಸುವರ್ಣ ವರ್ಷಗಳಲ್ಲಿನ ಅನನ್ಯ ಅಗತ್ಯತೆಗಳನ್ನು ಪೂರೈಸಲೆಂದೇ ಸೇವೆಗಳ ಸಮಗ್ರ ಶ್ರೇಣಿಯನ್ನು ವಿನ್ಯಾಸಗೊಳಿಸಲಾಗಿದೆ.

ಅತುಲ್ಯಾದಲ್ಲಿ ಅನುಭವಿ ಮತ್ತು ಸ್ನೇಹಪರವಾದ ಸಹಾನುಭೂತಿಯುಳ್ಳ ಆರೈಕೆದಾರರು ಪ್ರತಿಯೊಬ್ಬ ನಿವಾಸಿಯ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಆರೈಕೆ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ. ನಿವಾಸಿಗಳು ತಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಅಗತ್ಯವಿರುವ ಗಮನ ಮತ್ತು ಬೆಂಬಲ ಪಡೆಯುವುದನ್ನು ಸಂಸ್ಥೆಯು ಖಚಿತಪಡಿಸುತ್ತದೆ. ಸಂಸ್ಥೆಯ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮದ ಕಾರ್ಯಕ್ರಮಗಳ ಮೂಲಕ ಹಿರಿಯ ಚೇತನಗಳಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇವುಗಳಲ್ಲಿ ಫಿಟ್ನೆಸ್ ಚಟುವಟಿಕೆಗಳು ಇರಲಿವೆ ಮತ್ತು ಆರೋಗ್ಯ ರಕ್ಷಣೆಗೆ ಸಮಗ್ರ ವಿಧಾನಕ್ಕಾಗಿ ಕ್ಷೇಮ ತಪಾಸಣೆಗಳನ್ನೂ ಕಾಲಕಾಲಕ್ಕೆ ನಡೆಸಲಾಗುತ್ತದೆ.

ಅತುಲ್ಯಾದಲ್ಲಿ ನಿವಾಸಿಗಳಿಗೆ ಪರಸ್ಪರರ ನಡುವೆ ಭಾವನಾತ್ಮಕತೆ ಮತ್ತು ಹೊಂದಿಕೊಳ್ಳುವಂತಹ ಸಮುದಾಯವನ್ನು ಬೆಳೆಸುವುದರಲ್ಲಿ ನಂಬಿಕೆ ಇಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಹವ್ಯಾಸಿ ಕ್ಲಬ್ ಗಳು ಮತ್ತು ಸಾಮಾಜಿಕ ಕೂಟಗಳು ಸೇರಿದಂತೆ ವೈವಿಧ್ಯಮಯ ಮನರಂಜನಾ ಚಟುವಟಿಕೆಗಳನ್ನು ಸೌಹಾರ್ದತೆ ಪ್ರಜ್ಞೆಯನ್ನು ಮೂಡಿಸಲು ಆದ್ಯತೆ ನೀಡಲಾಗುತ್ತದೆ. ಇಲ್ಲಿನ ಪಾಕಶಾಲೆಯ ತಂಡವು ಪೌಷ್ಟಿಕ ಮತ್ತು ರುಚಿಕಟ್ಟಾದ ಊಟದ ವ್ಯವಸ್ಥೆಯನ್ನು ನೆರವೇರಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆಹಾರದ ಗುಣಮಟ್ಟ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನಿವಾಸಿಗಳ ಆರೋಗ್ಯವನ್ನು ಕಾಪಾಡುವಂತಹ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತದೆ.

ಅತುಲ್ಯಾ ಸೀನಿಯರ್ ಕೇರ್ ನ ವಿಶಿಷ್ಟ ಲಕ್ಷಣವೆಂದರೆ ತನ್ನ ನಿವಾಸಿಗಳಿಗೆ ಸುರಕ್ಷಿತ ಜೀವನಶೈಲಿಯನ್ನು ಒದಗಿಸುವ ಬದ್ಧತೆಯನ್ನು ಹೊಂದಿದೆ. ಇಲ್ಲಿನ ಮೂಲಸೌಕರ್ಯಗಳು ಸುಧಾರಿತ ಭದ್ರತಾ ಕ್ರಮಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒಳಗೊಂಡಂತೆ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಸೌಲಭ್ಯಗಳು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು, ಸುರಕ್ಷಿತ ಪ್ರವೇಶ ದ್ವಾರಗಳು ಮತ್ತು 24/7 ಗಂಟೆಗಳ ಮೇಲ್ವಿಚಾರಣೆ, ನಿವಾಸಿಗಳಿಗೆ ಸುರಕ್ಷಿತ ಮತ್ತು ಸಂರಕ್ಷಿತ ವಾತಾವರಣವನ್ನು ಖಚಿತಪಡಿಸುತ್ತದೆ. ನಿವಾಸಿಗಳಿಗೆ ಹೊಂದಿಕೊಳ್ಳುವಂತೆ ಮತ್ತು ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ, ಇಲ್ಲಿ ನಿವಾಸಿಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸಲಾಗುತ್ತಿದೆ. ಈ ಮೂಲಕ ಹಿರಿಯ ಆರೈಕೆಯನ್ನು ಮಾಡಲಾಗುತ್ತಿದ್ದು, ಅವರಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತಿದೆ.

ಅತುಲ್ಯಾ ಸೀನಿಯರ್ ಕೇರ್ ನ ಸಂಸ್ಥಾಪಕ ಮತ್ತು ಸಿಇಒ ಶ್ರೀನಿವಾಸನ್ ಜಿ ಅವರು ಮಾತನಾಡಿ, ``ನಮ್ಮ ಸಂಸ್ಥೆಯಲ್ಲಿ ಹಿರಿಯರನ್ನು ಆತ್ಮೀಯತೆ, ಕಾಳಜಿ ಮತ್ತು ಭದ್ರತೆಯೊಂದಿಗೆ ನೋಡಿಕೊಳ್ಳುವುದು ಧ್ಯೇಯವಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಸದ್ಯದಲ್ಲಿಯೇ ಇನ್ನೊಂದು ಸೀನಿಯರ್ ಕೇರ್ ಆರಂಭಿಸುವ ಮೂಲಕ ಹಿರಿಯರ ಸೇವೆಯನ್ನು ವಿಸ್ತರಿಸುತ್ತಿದ್ದೇವೆ. ಹಿರಿಯ ಜೀವಗಳಿಗೆ ಮನೆಯ ವಾತಾವರಣವನ್ನು ನೀಡುವ ನಿಟ್ಟಿನಲ್ಲಿ ಅವರ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ಅವರ ನಿರೀಕ್ಷೆಗಳನ್ನು ಮೀರಿದ ಜೀವನಶೈಲಿಯನ್ನು ನೀಡುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಇಲ್ಲಿನ ಮೂಲಸೌಕರ್ಯ ಶ್ರೇಷ್ಠತೆ ಮತ್ತು ವೈಯಕ್ತಿಕಗೊಳಿಸಿದ ಸೇವೆಗಳ ಮೂಲಕ ನಮ್ಮ ಹಿರಿಯರಿಗೆ ಸುರಕ್ಷಿತ ಮತ್ತು ಪರಿಪೂರ್ಣವಾದ ಜೀವನವನ್ನು ಖಾತ್ರಿಪಡಿಸುತ್ತಿದ್ದೇವೆ’’ ಎಂದರು.

ಅತುಲ್ಯಾ ಸೀನಿಯರ್ ಕೇರ್ ತನ್ನ ಎರಡನೇ ಸೌಲಭ್ಯವನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಆರಂಭಿಸಲು ಸಿದ್ಧವಾಗಿದೆ. ಈ ವಿಸ್ತರಣೆಯು ಅತ್ಯುತ್ತಮವಾದ ಸೇವೆಗಳು ಮತ್ತು ಮೂಲಸೌಕರ್ಯಗಳಿಂದ ಕೂಡಿರುತ್ತದೆ. ಇಲ್ಲಿನ ಹಿರಿಯ ಜೀವಗಳಿಗೆ ಸುರಕ್ಷಿತವಾದ ಜೀವನಶೈಲಿಯನ್ನು ಒದಗಿಸುವ ನಿಟ್ಟಿನಲ್ಲಿ ಅತುಲ್ಯಾ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.