



ಬ್ರಹ್ಮಾವರ: ತಾಲೂಕಿನ ಆವರ್ಸೆ ಗ್ರಾಮದ ಬಾವಿಯೊಂದರಲ್ಲಿ ಇಂದು ಕೊಳತೆ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಆವರ್ಸೆ ಗ್ರಾಮದ ಪುಷ್ಪರಾಜ್ ಶೆಟ್ಟಿ ಆವರ್ಸೆ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಜೀವನ್ ಮಿತ್ರ ಆ್ಯಂಬುಲೆನ್ಸ್ ನಾಗರಾಜ್ ಪುತ್ರನ್ ಕೋಟ ಅವರು, 30 ಅಡಿಯ ಆಳದ ಬಾವಿಗಿಳಿದು ಮೃತದೇಹವನ್ನು ಮೇಲೆತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಭರತ್ ಗಾಣಿಗ ಕೋಟ, ಪೊಲೀಸ್ ಠಾಣೆಯ ಸೂರ್ಯ ಹಾಲಾಡಿ, ಸತೀಶ್ ಉಪ್ಪುಂದ ಸಹಕರಿಸಿದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.