



ರಕ್ಷಾ ಜರ್ನಲಿಸಂ ವಿಭಾಗ ಎಂ.ಪಿ. ಎಂ ಕಾಲೇಜು ಕಾರ್ಕಳ ಕೆರುವಾಶೆ: ಸಾಮಾಜಿಕ ಜಾಗತೀಕರಣದಿಂದ ರೋಗಗಳು ದಿನನಿತ್ಯ ಹೆಚ್ಚುತ್ತಿದೆ. ಇದರಿಂದಾಗಿ ಸಾವು ಸಂಖ್ಯೆಯ ಏರಿಕೆ ಯಾಗುತ್ತಿದೆ. .
ಆದರೆ ಕಾರ್ಕಳದ ಈ ಕೆರುವಾಶೆ ಹಳ್ಳಿಯಲ್ಲಿ " ಆಯುಷ್ಯ ಮಂಡಲಂ" ಸಣ್ಣದಾಗಿ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೀಡಿಯೋ ಗಳಿಗೆ ಪ್ರಸಿದ್ಧಿ ಪಡೆದಿದೆ. ಬಣ್ಣ ಥೆರಪಿ, ಯೋಗ ವ್ಯಾಯಾಮ ಸೇರಿದಂತೆ ವಿವಿಧ ರೀತಿಯ ಚಿಕಿತ್ಸಾ ವಿಧಾನ ಕ್ರಮಗಳಿಗೆ ಹೆಸರುವಾಸಿಯಾಗಿದೆ.
ಆಯುಷ್ಯ ಮಂಡಲಂ ಆರಂಭಿಸಿದವರು ದಯಾನಂದ ಸಾಲಿಯನ್ . ಅವರು ಮೂಲತ: ಕಲ್ಲಮುಂಡ್ಕೂರಿನ ಕುದ್ರಿಪದವು ಪ್ರದೇಶದವರು . ಇವರು 2020 ಫೆಬ್ರುವರಿಯಲ್ಲಿ ಆರಂಭಿಸಿದರು.
ಆರಂಭಿಕ ಹಂತ: ಈ ದಂಪತಿಗಳು ವಿದ್ಯಾಭ್ಯಾಸದಲ್ಲಿ ಎಂ.ಬಿ.ಎ ಯನ್ನು ಮುಗಿಸಿ ನಂತರದಲ್ಲಿ ಇಡೀ ದಿವಸದ ಎಂ. ಎಸ್.ಸಿ ಯೋಗ ಥೆರಪಿ ಮಾಡಿಕೊಂಡರು ಇವರು ಅವರ ಕೆಲಸವನ್ನು ಬಿಟ್ಟು ಯೋಗದಲ್ಲಿ ಮಾಸ್ಟರ್ ಪದವಿಯನ್ನು ಪಡೆದುಕೊಂಡರು ಇವರು ಯೋಗ ಥರಪಿಯಾಗಿ ಆಯುಷ್ಯ ಮಂಡಲಂ ವನ್ನು ಶುರು ಮಾಡಿದರು ಈ ಯೋಗ ಥೆರಪಿಯಲ್ಲಿ ಅವರ ಹೆಂಡತಿ ಅನುಷ್ಕ ರವರು ಈ ಥೆರಪಿಯಲ್ಲಿ ತೊಡಗಿಸಿಕೊಂಡರು. ಇವರು ಅಮೇರಿಕಾದ ವಾಷಿಂಗ್ಟನ್ ನಲ್ಲಿ ಐ ಎ ಟಿ ಎ ಪದವಿಯನ್ನು ಪೂರೈಸಿದರು. ಮಾಸ್ಟರ್ ಸೈಕಾಲಜಿ ಆನಂತರದಲ್ಲಿ ಇವರು ಎಲ್ಲಾ ಥೆರಪಿಗಳನ್ನು ಕಲಿತುಕೊಂಡಿದ್ದರು ಜೊತೆಗೆ ಬೇರೆ ಬೇರೆ ಶಿಕ್ಷಕರಿಂದ ಮಾರ್ಗದರ್ಶನವನ್ನು ಪಡೆದುಕೊಂಡಿದ್ದರು
ಡಿಜಿಟಲ್ ಮಾಧ್ಯಮದ ಪಾತ್ರ: ಕೊರನಾ ಸಂದರ್ಭದಲ್ಲಿ ಯೋಗ ಥೆರಪಿ ಯಿಂದ ಹಲವರು ಜನ ಉಪಯೋಗ ಪಡೆದುಕೊಳ್ಳದೆಲ್ಲದೆ ಆಯುಷ್ಯ ಮಂಡಲಂ ಎನ್ನುವಂತಹ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್, ಫೇಸ್ಬುಕ್ ಇನ್ನಿತರ ಡಿಜಿಟಲ್ ಮಾಧ್ಯಮಗಳ ಮೂಲಕ ಹಲವಾರು ಉಪಯೋಗಗಳನ್ನು ಪಡೆದುಕೊಂಡಿದ್ದಾರೆ ಮತ್ತು ಆನ್ಲೈನ್ ಕ್ಲಾಸ್ ಗಳನ್ನು ಶುರು ಮಾಡಿ ಇದರಿಂದ ಬಹಳ ಜನ ಮನೆಯಿಂದಲೇ ವಿಡಿಯೋಗಳನ್ನು ನೋಡಿ ಕಲಿಯುತ್ತಿದ್ದರು ಇದಲ್ಲದೆ ಟೆಲಿಗ್ರಾಂ ಆಪ್ ಗಳ ಮುಖಾಂತರ ಆಯುಷ್ಯ ಮಂಡಲಂ ಎನ್ನುವಂತಹ ಗುಂಪುಗಳನ್ನು ರಚನೆ ಮಾಡಿ ಇದರಲ್ಲಿ ವಿಡಿಯೋಗಳನ್ನು ಹಾಕಿ ಇದರಲ್ಲಿ ಬಹಳಷ್ಟು ಜನ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದರು ಇನ್ನು ಕೆಲವರು ಕಲಿಯಲು ಆಸಕ್ತಿ ಹೊಂದುವವರು ಅಥವಾ ಬೇರೆ ಬೇರೆ ದೇಶಗಳಲ್ಲಿ ಇರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರು
ಥೆರಪಿಯ ಪ್ರಯೋಜನಗಳು: ಈ ಒಂದು ಥೆರಪಿಂದ 5-6 ಸಾವಿರ ಜನ ಇದರ ಉಪಯೋಗಗಳನ್ನು ಪಡೆದುಕೊಂಡಿದ್ದಾರೆ ಅಲ್ಲದೆ ಈ ಒಂದು ಥೆರಪಿಯನ್ನು ಕಲಿತುಕೊಂಡು ಅವರ ಕುಟುಂಬದವರಿಗೆ ಬಿಪಿ, ಶುಗರ್, ಬೆನ್ನು ನೋವು ,ಕುತ್ತಿಗೆ ನೋವು ಯಾವುದೇ ತರಹದ ನೋವುಗಳಿಗೆ ಹೇಗೆ ಗುಣಪಡಿಸುವುದು ಎನ್ನುವುದನ್ನು ಕಲಿತುಕೊಂಡಿದ್ದಾರೆ. ಇದರಿಂದ ಎಷ್ಟೋ ಜನ ಕೆಲಸಕ್ಕೆ ಹೋಗದವರು ,ಶಾಲೆಗೆ ಹೋಗದವರು ,ವಯಸ್ಸಾದವರು ಈ ಒಂದು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಶಸ್ತ್ರ ಚಿಕಿತ್ಸೆಯಲ್ಲಿ ದೊರಕಬಹುದಾದ ಉತ್ಪನ್ನಗಳು: ಈ ಒಂದು ಶಸ್ತ್ರ ಚಿಕಿತ್ಸೆಯಲ್ಲಿ ಕೆಲವೊಂದು ಉತ್ಪನ್ನಗಳು ಇವರಲ್ಲಿ ದೊರೆಯುತ್ತದೆ ಅವುಗಳೆಂದರೆ ಮ್ಯಾಗ್ನೆಟ್ ಬೆಲ್ಟ್ ,ಮಂಡಿ ನೋವಿಗೆ ,ಕುತ್ತಿಗೆ ನೋವಿಗೆ, ಥೈರಾಯಿಡ್ ಗೆ ಇನ್ನು ಬೇರೆ ಬೇರೆ ಕಾಯಿಲೆಗಳಿಗೆ ಹಲವಾರು ಉತ್ಪನ್ನಗಳು ಇವರಲ್ಲಿ ದೊರಕಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.