



ಅಜೆಕಾರು: ಸಂಘಟಕ, ಕಲಾ ಪೋಷಕ, ರಾಜಕೀಯ ದುರೀಣ ಅಂಡಾರು ಸುಕುಮಾರ್ ಶೆಟ್ಟಿ ಮತ್ತು ಯುವ ಪ್ರತಿಭಾನ್ವಿತ ಯಕ್ಷಗಾನ ಕಲಾವಿದ ಅವಕಾಶ್ ಜೈನ್ ಅವರಿಗೆ ಮುಂಬಯಿ ಘನ್ಸೋಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದೆ. ಯುವಕರನ್ನು ಸಾಧನೆಯನ್ನು ಗುರುತಿಸುವುದಕ್ಕಾಗಿ ಈ ಗೌರವ ಎಂದು ಸಂಘಟಕ ಬಾಲಕೃಷ್ಣ ಶೆಟ್ಟಿ ಅಜೆಕಾರು ತಿಳಿಸಿದ್ದಾರೆ. ಸುಕುಮಾರ್ ಅವರು ಥಾಣೆಯಲ್ಲಿ ಹೊಟೇಲಿಗರಾಗಿದ್ದು, ಥಾಣೆಯ ಭಾಜಪ ದಕ್ಷಿಣ ಭಾರತೀಯ ವಿಭಾಗದ ಅಧ್ಯಕ್ಷರಾಗಿದ್ದಾರೆ. ಅಜೆಕಾರು ಜ್ಯೋತ್ತಿ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸ ಮುಗಿಸಿ ಮುಂಬಯಿಯ ರಾತ್ರಿ ಶಾಲೆಗಳಲ್ಲಿ ಉನ್ನಡ ಶಿಕ್ಷಣ ಪಡೆದಿದ್ದಾರೆ, ಅಂಡಾರು ರಾಜು ಶೆಟ್ಟಿ ಮತ್ತು ರತಿ ಶೆಟ್ಟಿ ದಂಪತಿಗಳ ಸುಪುತ್ತ. ಅವಕಾಶ ಜೈನ್ ಉತ್ತಮ ಕಲಾವಿದನಾಗಿ ಗುರುತಿಸಲ್ಪಡುತ್ತಿದ್ದು ಕೆರ್ವಾಸೆಯವರಾಗಿದ್ದಾರೆ. ಆನಂದ ಗುಡಿಗಾರ ಮತ್ತು ಬಾಲಕೃಷ್ಣ ಶೆಟ್ಟಿ ಅವರ ಗರಡಿಯಲ್ಲಿ ಪಳಗಿ ಮಹಿಷಾಸುರ, ಹಿರಣ್ಯಾಕ್ಷ ದಂತಹ ಪ್ರಮುಖ ಪಾತ್ರಗಳಲ್ಲಿ ಗಮನಸೆಳೆದಿದ್ದಾರೆ. ಕೆರ್ವಾಸೆ ಯುವರಾಜ್ ಜೈನ್ ಮತ್ತು ಆಶಾ ಜೈನ್ ಅವರ ಸುಪುತ್ರ. ಮುಂಬಯಿಯಲ್ಲಿ ಇಂಟಿರಿಯರ್ ಡಿಸೈನಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.