



ಕಾರ್ಕಳ: ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್÷್ಸ ವಸ್ತç ಮಳಿಗೆಗೆ ಶಿವಮೊಗ್ಗ ಸಂಸದ ರಾಘವೇಂದ್ರ ಯಡಿಯೂರಪ್ಪ ಭೇಟಿ ನೀಡಿದರು. ಕಾರ್ಕಳದ ಬಿ. ಜೆ. ಪಿ. ಹಿರಿಯ ಮುಖಂಡ ಕೋಶಾಧಿಕಾರಿಯಾಗಿದ್ದ ದಿ. ಪಾಂಡುರAಗ ಪ್ರಭು ರವರ ಪುತ್ರ ರವಿ ಪ್ರಕಾಶ್ ಪ್ರಭುರವರ ಮಾಲಕತ್ವದ ಸಂಸ್ಥೆ ಇದಾಗಿದೆ. ಇದೇ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ರವರನ್ನು ರವಿ ಪ್ರಕಾಶ್ ಪ್ರಭು ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಪೂರ್ಣಿಮಾ ಸಮೂಹ ಸಂಸ್ಥೆಯ ಮತ್ತೊಂದು ಮಳಿಗೆಯಾಗಿರುವ ಜೋಡುರಸ್ತೆಯ ಪ್ರೆöÊಮ್ ಮಾಲ್‌ನಲ್ಲಿ ಪೂರ್ಣಿಮಾ ಲೈಫ್ ಸ್ಟೆöÊಲ್ ಮಾರ್ಚ್ ೧೦ ರಂದು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹರ್ಷೇಂದ್ರ ಕುಮಾರ್, ತುಳು ಚಿತ್ರ ನಟ ಅರವಿಂದ್ ಬೋಳಾರ್ ಶುಭಾಂಶಯಗೈಯಲಿದ್ದಾರೆ. ಅದರ ಅಮಂತ್ರಣ ಪತ್ರಿಕೆ ನೀಡಿದರು. ಯಾವುದೇ ನಗರ, ಪಟ್ಟಣ ಇರಲಿ ಅದರ ಅಭಿವೃದ್ಧಿ ಕಾರ್ಯದಲ್ಲಿ ಬೃಹತ್ ಮಾಲ್‌ಗಳ ಪಾತ್ರ ಮಹತ್ವದಾಗಿದ್ದು, ಪೂರ್ಣಿಮಾ ಲೈಫ್ ಸ್ಟೆöÊಲ್ ನಾಗರಿಕರಿಗೆ ಹೊಸತನ ನೀಡಲಿ ಎಂದು ಇದೇ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ಹೇಳಿದರು. ಮಾರುತಿ ಗ್ಯಾಸ್ ಮಾಲಕ ನಿತ್ಯಾನಂದ ಪೈ , ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ, ಪ್ರೆöÊಮ್ ಮಾಲ್‌ನ ಪಾಲುದಾರರಾದ ಸಂಪತ್ ಜೈನ್, ಸಚಿನ್ ವಿ.ಸಾಲಿಯಾನ್ ಉಪಸ್ಥಿತ ರಿದ್ದರು.
ಕೇಶವ ಕೃಪಕ್ಕೆ ಭೇಟಿ.... ಈ ಸಂಧರ್ಭ ದಲ್ಲಿ ಕಾರ್ಕಳದಲ್ಲಿ ೧೯೫೦ ರಲ್ಲಿ ಆರಂಭ ಗೊಂಡ ಸುಪ್ರಸಿದ್ದ ಬಟ್ಟೆ ಮಳಿಗೆ ಪೂರ್ಣಿಮಾ ಕ್ಲಾತ್ ಶಾಪ್ ಹಾಗೂ ಕಾರ್ಕಳದಲ್ಲಿ ಪ್ರಪ್ರಥವಾಗಿ ಅರ್.ಎಸ್,ಎಸ್ ಶಾಖೆ ಆರಂಭ ಗೊಂಡ ಮನೆ "ಕೇಶವ ಕೃಪಾ" ಕ್ಕೆ ರಾಘವೇಂದ್ರ ಯಡಿಯೂರಪ್ಪ ಭೇಟಿ ನೀಡಿದರು. ಮಾಜಿ ಪ್ರಧಾನಿಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ರುಗಳಾದ ಜಾರ್ಜ್ ಫರ್ನಾಂಡಿಸ್, ಸುಷ್ಮಾ ಸ್ವರಾಜ್, ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗ್ಗಡೆ, ರಾಜ್ಯ ಸರ್ಕಾರದ ಗೃಹ ಸಚಿವ ಡಾ.ವಿ. ಎಸ್. ಆಚಾರ್ಯ ರವರು ಕಾರ್ಕಳಕ್ಕೆ ಭೇಟಿ ನೀಡಿದಾಗ ಅವರೆಲ್ಲರೂ ಇದೇ ಕೇಶವ ಕೃಪಾಕ್ಕೆ ಭೇಟಿ ನೀಡುತ್ತಿದ್ದ ಬಗ್ಗೆ ರವಿಪ್ರಕಾಶ್ ಸವಿನೆನಪಿಗಳು ಮಾಡಿಕೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.