



ಬೆಂಗಳೂರು : ರಾಜ್ಯಾದ್ಯಂತ ಆಚರಣೆ ಆಗಬೇಕಿದ್ದ ಒನಕೆ ಓಬವ್ವ ಜಯಂತಿ ಮುಂದೂಡಲ್ಪಟ್ಟಿದೆ. ನಾಳೆಯ ಒನಕೆ ಓಬವ್ವ ಜಯಂತಿ ಎಂದು ಸರ್ಕಾರ ನಿನ್ನೆಯಷ್ಟೇ ಘೋಷಣೆ ಮಾಡಿತ್ತು. ಮಾತ್ರವಲ್ಲ, ನ. 11ರಂದು ರಾಜ್ಯಾದ್ಯಂತ ಜಯಂತಿ ಆಚರಣೆ ಆಗಲಿದೆ ಎಂದೂ ಆದೇಶ ಹೊರಡಿಸಿತ್ತು.ಆದರೆ ಅದರ ಬೆನ್ನಿಗೇ ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ನಿನ್ನೆಯಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನ. 11ರಂದು ಆಚರಿಸಬೇಕಿದ್ದ ಒನಕೆ ಓಬವ್ವ ಜಯಂತಿಯನ್ನು ಮುಂದೂಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಡಿ. 10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದ್ದು, 14ರಂದು ಮತ ಎಣಿಕೆ ನಡೆಯಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.