



ಕಾರ್ಕಳ ಫೆ: ೨೪: ಕರಾವಳಿಯ ಪಶ್ಚಿ ಘಟ್ಟದ ತಪ್ಪಲಿನಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ವೈಶಿಷ್ಟö್ಯತೆಯನ್ನು ಹೊಂದಿರುವ ಕಾರ್ಕಳದ ಕಲೆ, ಸಾಂಸ್ಕೃತಿಕ ಹಾಗೂ ಪೌರಾಣಿಕ ಹಿನ್ನೆಲೆಗಳನ್ನು ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಫೆ.10 ರಿಂದ ಫೆ.20 ರವರೆಗೆ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ “ಕಾರ್ಕಳ ಉತ್ಸವ” ಕಾರ್ಯಕ್ರಮ ಆಯೋಜಿಸಲಾಗಿದ್ದು ಪೂರ್ವ ತಯಾರಿ ಭರದಿಂದ ಸಾಗುತ್ತಿದೆ.
ಈ ವೈಭವೋವಿತ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಯುತ ಅದ್ಧೂರಿ ಮೆರವಣಿಗೆ , ಹಲವಾರು ಕಲಾ ತಂಡಗಳಿಂದ ವಿವಿಧ ಪ್ರದರ್ಶನಗಳು ನಡೆಯಲಿದ್ದು ಲಕ್ಷಾಂತರ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಕಾರ್ಕಳ ನಗರ ಸೌಂದರ್ಯಕರಣವು ಉತ್ಸವದ ಒಂದು ಅಂಗವಾಗಿದ್ದು ಕಾರ್ಕಳ ನಗರದ ಎಲ್ಲಾ ರಸ್ತೆಗಳಿಗೆ ಡಾಮರೀಕರಣ ಮಾಡುವಂತೆ ಕಾರ್ಕಳ ಶಾಸಕರೂ, ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಸಚಿವರಾದ ವಿ. ಸುನಿಲ್ ಮಕುಮಾರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಪುರಸಭೆ ಮತ್ತು ಇತರ ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್‌ಗಳ ಸಭೆ ನಡೆಸಿ ಕಾರ್ಕಳ ಉತ್ಸವಕ್ಕೆ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ತಾಲೂಕಿನಿಂದ ಹಾಗೂ ಹೊರ ಜಿಲ್ಲೆಗಳಿಂದ ಬರುವ ಜನರ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನಗರದ ಎಲ್ಲಾ ರಸ್ತೆಗಳಿಗೆ ತಕ್ಷಣ ಡಾಮಾರೀಕರಣ ಮಾಡುವಂತೆ ಸೂಚಿಸಿದರು.
ವಾರಾಹಿ ಯೋಜನೆ ಈಗಾಗಲೇ ೩ ಕೋಟಿ ಅನುದಾನ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ೫೧ ಲಕ್ಷ ಒಟ್ಟು ೩.೫೧ ಕೋಟಿ ಅನುದಾನ ರಸ್ತೆ ಅಭಿವೃದ್ಧಿಗೆ ಮೀಸಲಿರಿಸಿದ್ದು ತಕ್ಷಣವೇ ಕಾಮಗಾರಿ ಆರಂಭಿಸುವAತೆ ಇಂಜಿನಿಯರ್‌ಗಳಿಗೆ ಮಾನ್ಯ ಸಚಿವರು ಸೂಚಿಸಿದರು ಎಂದು ಕಾರ್ಕಳ ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.