logo
WhatsApp Image 2026-04-02 at 14.46.04.jpeg
hindalco everlast.jpeg

ಬಜಗೋಳಿ: ಸ್ಪ್ರಿಂಗ್ ಆನಿಯನ್ ಗಾಗಿ ಇಬ್ಬರ ನಡುವೆ ಮಾರಾಮಾರಿ: ಪ್ರತ್ಯೇಕ ಪ್ರಕರಣ ದಾಖಲು

ಟ್ರೆಂಡಿಂಗ್
share whatsappshare facebookshare telegram
11 Sept 2022
post image

ಕಾರ್ಕಳ:

ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಮಾರ್ಕೆಟ್ ಬಳಿ ಸ್ಪ್ರಿಂಗ್ ಆನಿಯನ್ ಕೊಳ್ಳುವ ವಿಚಾರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

ನಿನ್ನೆ ಬೆಳಿಗ್ಗೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿ ಮಾರ್ಕೆಟ್ ನಲ್ಲಿರುವ ನೂರಾಳ್ ಬೆಟ್ಟುವಿನ ಜಿನೇಶ್ ಎಂಬವರ ಅಂಗಡಿಗೆ ಎದುರಿನ ಅಂಗಡಿಯಲ್ಲಿರುವ ಮುಡಾರು ಗ್ರಾಮದ ನಿವಾಸಿ ಪ್ರಸನ್ನ ಇವರು ಬಂದು 2 ಕಟ್ಟು ಸ್ಪ್ರಿಂಗ್ ಆನಿಯನ್ ಕೇಳಿದ್ದರು. ಈ ವೇಳೆ ಅವರಿಗೆ ಸ್ಪ್ರಿಂಗ್ ಆನಿಯನ್ ಕೊಟ್ಟು 40 ರೂಪಾಯಿ ಕೇಳಿದ್ದರು. ಇದಕ್ಕೆ ಏಕಾಏಕಿ ಸಿಟ್ಟುಗೊಂಡ ಪ್ರಸನ್ನ ನು “ಯಾರಿಗೆ ಬೇಕು ನಿನ್ನ ಸ್ಪ್ರಿಂಗ್ ಆನಿಯನ್” ಎಂದು ಬಿಸಾಡಿ ಅಲ್ಲಿಯೇ ಕ್ರೇಟ್ ನಲ್ಲಿದ್ದ ಚೂರಿ ತೆಗೆದು ಜಿನೇಶ್ ಅವರಿಗೆ ಚುಚ್ಚಲು ಬಂದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಜಿನೇಶ್ ಅವರ ಬೆನ್ನಿಗೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಜಿನೇಶ್ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಇದೇ ಘಟನೆಗೆ ಸಂಬಂಧಿಸಿ ಪ್ರಸನ್ನ ಅವರ ಪತ್ನಿ ಪ್ರತಿಮಾ ಕೂಡಾ ಪೊಲೀಸರಿಗೆ ದೂರು ನೀಡಿದ್ದು, ಬಜಗೋಳಿ ಮಾರ್ಕೆಟ್ ನಲ್ಲಿರುವ ಜಿನೇಶ್ ಇವರ ಅಂಗಡಿಗೆ ಪ್ರತಿಮಾ ಅವರ ಗಂಡ ಪ್ರಸನ್ನ ಅವರು ಸ್ಪ್ರಿಂಗ್ ಆನಿಯನ್ ಕೊಳ್ಳಲು ಹೋಗಿದ್ದ ವೇಳೆ, ಪ್ರಸನ್ನ ಹಾಗೂ ಜಿನೇಶ್ ನಡುವೆ ಸ್ಟ್ರೀಂಗ್ ಆನಿಯನ್ ನ ಹಣವನ್ನು ಕೊಡುವ ವಿಚಾರದಲ್ಲಿ ಗಲಾಟೆ ಆಗಿದ್ದು, ಈ ವೇಳೆ ಜಿನೇಶ್ ನು ಪ್ರಸನ್ನ ಅವರಿಗೆ ಹಲ್ಲೆ ಮಾಡಿದ್ದು, ತಡೆಯಲು ಹೋದ ಪ್ರತಿಮಾ ಅವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿದ್ಧಾರೆ‌. . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.