



ಕಾರ್ಕಳ: ಪಂಜೆ, ಕಿûಞಣ್ಣ ರೈಗಳ ಸಾಹಿತ್ಯಗಳನ್ನು ಓದಿ ಬೆಳದ ನಾವು ಈಗ ಹೊಸಚೆಂತನೆಯ ಕವಿಗಳನ್ನು ಗಮನಿಸುತ್ತಿದ್ದೇವೆ. ರಾತ್ರಿ ಈ ಶುದ್ಧ ಬೆಳದಿಂಗಳಿನಲ್ಲಿ ತ್ಯಾಗಮೂರ್ತಿ ಭಾಹುಬಲಿಯ ಸನ್ನಿಧಿಯಲ್ಲಿ ಈ ಬೆಳದಿಂಗಳ ಕಾರ್ಯಕ್ರಮ ಅವಿಸ್ಮರಣೀಯ ಎಂದು ರಾಜ್ಯೋತ್ಸವ ಪುರಸ್ಕöÈತರು, ಹಿರಿಯ ನ್ಯಾಯವಾದಿಗಳಾದ ಎಂ.ಕೆ.ವಿಜಯಕುಮಾರ್ ಹೇಳಿದರು. ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸರ್ವರ ಸಹಕಾರದೊಂದಿಗೆ ಬುಧವಾರ ಕಾರ್ಕಳ ಬೆಟ್ಟದ ರಥೋತ್ಸವದ ಬಳಿಕ ಆಯೋಜಿಸಿದ್ದ ಅಖಿಲಭಾರತ ಬೆಳದಿಂಗಳ ಕವಿಸಮ್ಮೇಳನವನ್ನು ಬೆಟ್ಟದ ಬಾಹುಬಲಿ ಸ್ವಾಮಿಯ ಪಾರಂಪರಿಕ ಅರ್ಚಕರನ್ನು ಗೌರವಿಸುವ ಮೂಲಕ ಉದ್ಘಾಟಿಸಿದರು. ಭಾಷಣ ಜನರಿಗೆ ಬೇಡದ ವಿಷಯವಾಗಿದೆ, ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಆದರೆ ಬೆಳದಿಂಗಳ ಕವಿ ಸಮ್ಮೇಳನದಂತಹ ವಿನೂತನ ಕಾರ್ಯಕ್ರಮಗಳು ಹೊಸ ಭರವಸೆಯನ್ನು ಉಂಟುಮಾಡುತ್ತವೆ. ಡಾ.ಶೇಖರ ಅಜೆಕಾರು ಬೆಟ್ಟದಲ್ಲಿ ೩ ಬಾರಿಗೆ ಸಾಹಿತ್ಯ ಸಂಸ್ಕöÈತಿ ಉದ್ದೀಪನಗೊಳಿಸುವ ಇಂತಹ ಸಮ್ಮೇಳನ ಆಯೋಜಿಸುತ್ತಿದ್ದಾರೆ. ಇದು ನನ್ನ ಬಹುಕಿನಲ್ಲಿ ಮರೆಯಲಾಗದ ಕ್ಷಣ, ದಿನ ಎಂದು ಅವರು ಅಭಿಪ್ರಾಯಪಟ್ಟರು. ಹೊಸ ಜನಾಂಗದ ಕವಿಗಳು ವಿಭಿನ್ನ ಆಲೋಚನೆಯ, ಭಿನ್ನ ನೆಲೆಯ ಕವನಗಳನ್ನು ರಚಿಸುತ್ತಾ ಬರುತ್ತಿದ್ದಾರೆ. ಅದನ್ನು ಜಾಲತಾಣಗಳಲ್ಲಿ ವೀಕ್ಷಿಸ ಬಹುದಾಗಿದೆ ಎಂದು ಕಾವ್ಯಾಭಿಷಢಕ ಮಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಸೆ ಮಿತ್ರಪ್ರಭಾ ಹೆಗ್ಡೆ ಹೇಳಿದರು. ಮಾತೃ ಭಾಷೆಯಿಂದ ವಂಚಿತರಾದ ಯಾರೂ ಕೂಡಾ ಬದುಕಿನಲ್ಲಿ ಮುಂದೆ ಬರುವುದು ಸಾಧ್ಯವಿಲ್ಲ, ಶ್ರೀಮಂತರಾಗುವುದು ಸಾಧ್ಯವಿಲ್ಲ ಕವಿಗಳ ರಚನೆಗಳು ಸಾರ್ವಕಾಲೀಕವಾದುವುಗಳಾಗಿರ ಬೇಕು ಎಂದು ಈ ಬೆಳದಿಂUಳ ಕವಿಗೋಷ್ಠಿಯ ಸರ್ವಾಧ್ಯಕ್ಷೆ ಪೂರ್ಣಿಮಾ ಸುರೇಶ್ ಹೇಳಿದರು. ಡಾ.ಸುರೇಶ ನೆಗಳಗುಳಿ, ರೇಮಂಡ್ ಡಿಕುನ್ಹಾ ತಾಕೋಡೆ, ಕಥಾಬಿಂಧು ಪಿ.ವಿ.ಪ್ರದೀಪ್ ಕುಮಾರ್Ä ಮಂಗಳೂರು, ರಾಧಾಕೃಷ್ಣ ತೋಡಿಕಾನ, ಶಶಿಕಲಾ ಹೆಗ್ಡೆ, ಡಾ.ವಾಣಿ ಗಿರೀಶ್, ನಾಗಶ್ರೀ ನಾಗರಕಟ್ಟೆ , ಸಾಣೂರು ಅರುಣ್ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ವಿಮಾನ ನಿಲ್ದಾಣದ ಆಡಳಿತ ನಿರ್ದೇಶಕರಾಗಿದ್ದ ಎಂ.ಆರ್.ವಾಸುದೇವ್ ಅವರನ್ನು ಕರ್ನಾಟಕ ಆಡಳಿತಸೇವಾ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು. ಡಾ.ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ದೀಪಕ್ ಎನ್ ದುರ್ಗಾ ನಿರೂಪಿಸಿದರು. ವೀರಣ್ಣ ಕುರುವತ್ತಿ ಗೌಡರ್ ವಂದಿಸಿದರು. ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ, ಬಾಹುಬಲಿ ಇಂದ್ರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಮಕ್ಕಳ ವಿಭಾಗದ ಸುನಿಧಿ ಮತ್ತು ಸುನಿಜ, ಕೃಷ್ಣಪ್ಪ ಸೊಪ್ಪಿನ ಲಿಂಗನಾಯಕನಹಳ್ಳಿ ಸಹಕರಿಸಿದರು. ದತ್ತಾತ್ರೇಯ ನೊಣವಿನಕೆರೆ ಅÀವರನ್ನು ಪ್ರೇಕ್ಷಕರ ಪರವಾಗಿ ಸನ್ಮಾನಿಸಲಾಯಿತು. ಪೂರ್ಣಿಮಾ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ.ಸುಮತಿ ಪ್ರಭು, ಡಾ.ಶೇಖರ ಅಜೆಕಾರು, ಡಾ.ವಾಣಿಶ್ರೀ, ಡಾ.ಸುರೇಶ ನೆಗಳಗುಳಿ, ಎಂ.ಆರ್ ವಾಸುದೇವ, ಕಾಂತಾವರ ಶಿವಾನಂದ ಶೆಣೈ, ನಾಗಶ್ರೀ ನಾಗರಕಟ್ಟೆ, ಕೃಷ್ಣಪ್ಪ ಸೊಪ್ಪಿನ, ಗುರುರಾಜ್ ಎಂ.ಆರ್, ವೀರಣ್ಣ ಕುರುವತ್ತಿಗೌಡರ್, ಸ್ವರ್ಣಲತಾ ನೆಲ್ಲಿಕಾರು, ಸೋಮಪ್ಪ ದೇವಾಡಿಗ ಪರ್ಕಳ, ಎಡ್ವರ್ಡ್ ಲೊಬೋ ತೊಕ್ಕೊಟ್ಟು, ರಾಧಾಕೃಷ್ಣ ತೋಡಿಕಾನ, ಮಿತ್ರಪ್ರಭಾ ಹೆಗ್ಡೆ, ಮನ್ಸೂರ್ ಮುಲ್ಕಿ ಸಹಿತ ಕವಿಗಳು ಕವಿತಾವಾಚನ ಮಾಡಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.