



ಬೆಂಗಳೂರು : ಠಾಣೆ ಯಲ್ಲಿ ಹಸುವಿನ ಕರುವನ್ನು ಸಾಕಿ ಜನಪ್ರಿಯತೆ ಗಳಿಸಿದ್ದ ಲೊಕಾಯುಕ್ತಾ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ.ಇಂದು ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ವೇಳೆಯಲ್ಲಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ವೈದ್ಯರನ್ನು ಮನೆಗೆ ಕರೆಯಿಸಿದ್ದಾರೆ. ಆದರೆ ವೈದ್ಯರು ಬರುವ ಹೊತ್ತಿಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭೈಯ್ಯಪ್ಪನ ಹಳ್ಳಿ ಠಾಣೆ ಯಲ್ಲಿ ನಿರ್ವಹಿಸುವಾಗ ಭೀಮಾ ಎಂದು ಹೆಸರಿಟ್ಟು ಒಂದು ಹಸುವಿನ ಕರುವನ್ನು ಸಾಕಿದ್ದರು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಂಗಳೂರು ನಗರದ ಭೈಯಪ್ಪನಹಳ್ಳಿ ಠಾಣೆ, ಸಿಇಎನ್, ಲೋಕಾಯುಕ್ತ ಸೇರಿದಂತೆ ವಿವಿಧ ಠಾಣೆಗಳಲ್ಲಿ ಮಹಮ್ಮದ್ ರಫಿಕ್ ಕರ್ತವ್ಯ ನಿರ್ವಹಿಸಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.