



ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(BIAL) ಹತ್ತಿರ ಎರಡು ಇಂಡಿಗೋ ದೇಶೀಯ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ ಘಟನೆ ನಡೆದಿದೆ.
ಮೊನ್ನೆ ಜನವರಿ 7ರಂದು ಬೆಳಗ್ಗೆ 8.45ರ ಸುಮಾರಿಗೆ ಸಂಭವಿಸಿದ ಘಟನೆಗೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ನಿಯಂತ್ರಕರ ನಡುವಿನ ಸಂವಹನದ ಕೊರತೆಯೇ ಕಾರಣವಾಗಿದೆ ಎಂದು ತಿಳಿದುಬಂದಿದೆ
ಪರಿಸ್ಥಿತಿ ಕಠಿಣವಾಗುತ್ತಿತ್ತು: ನಂತರ, ಬೆಳಗಿನ ಪಾಳಿಯ ಮುಖ್ಯಸ್ಥರು, ಸಿಂಗಲ್ ರನ್‌ವೇಯಲ್ಲಿ ಹೋಗಲು ನಿರ್ಧರಿಸಿದರು. ಆಗಮನ ಮತ್ತು ನಿರ್ಗಮನ ಎರಡಕ್ಕೂ ಉತ್ತರ ರನ್‌ವೇಯನ್ನು ಬಳಸಲು ನಿರ್ಧರಿಸಿದರು. ದಕ್ಷಿಣ ರನ್‌ವೇಯನ್ನು ಮುಚ್ಚಲಾಯಿತು. ಆದರೆ ದಕ್ಷಿಣ ಭಾಗದ ನಿಯಂತ್ರಕಕ್ಕೆ ತಿಳಿಸಲಿಲ್ಲ. ಪರಿಣಾಮವಾಗಿ, ಅವರು ಕೋಲ್ಕತ್ತಾಗೆ ಹೊರಡುವ ವಿಮಾನಕ್ಕೆ ಹಸಿರು ನಿಶಾನೆ ತೋರಿದರು, ಉತ್ತರ ಟವರ್ ನಿಯಂತ್ರಕರು ಭುವನೇಶ್ವರಕ್ಕೆ ಹೊರಡಲು ವಿಮಾನಕ್ಕೆ ಗ್ರೀನ್ ಸಿಗ್ನಲ್ ತೋರಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.