



ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಶಾಖೆಯಿಂದ ಭ್ರಷ್ಟಾಚಾರ ತ್ಯಜಿಸಿ, ರಾಷ್ಟ್ರಕ್ಕೆ ಬದ್ಧರಾಗಿರೋಣ ಎಂಬ ಧ್ಯೇಯದೊಂದಿಗೆ ಭಾರತದ ಉಕ್ಕಿನ ಮನುಷ್ಯ ಶ್ರೀಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಅ.31 ರಂದು ಮಂಗಳವಾರ ಬೆಳಿಗ್ಗೆ 6.30 ಗಂಟೆಗೆ ವಾಕಥಾನ್ ಆಯೋಜಿಸಿತು. .

ಶ್ರೀ ಅನುಪಮ್ ಅಗರ್ವಾಲ್, ಐಪಿಎಸ್ ಅತಿಥಿಯಾಗಿ ಹಾಜರಿದ್ದು, ವಾಕಥಾನ್‍ಗೆ ಚಾಲನೆ ನೀಡಿದರು. ವಿಜಯ ಟವರ್ಸ್, ಜ್ಯೋತಿ ವೃತ್ತದಿಂದ ಎ.ಬಿ.ಶೆಟ್ಟಿ ವೃತ್ತದವರೆಗೆ ವಾಕಥಾನ್ ನಡೆಯಿತು.
ಕೆಎಸ್‍ಪಿಎಸ್, ಎಸಿಪಿ ಟ್ರಾಫಿಕ್, ಶ್ರೀಮತಿ ಗೀತಾ ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕರು ಮತ್ತು ಮಂಗಳೂರು ಬ್ಯಾಂಕ್ ಆಫ್ ಬರೋಡಾ ವಲಯ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಆರ್, ಮಂಗಳೂರು ವಲಯದ ಡಿಜಿಎಂ ಮತ್ತು ಉಪ ವಲಯ ಮುಖ್ಯಸ್ಥರಾದ ಶ್ರೀ ರಮೇಶ್ ಕಾನಡೆ, ನೆಟ್‍ವರ್ಕ್ ಡಿಜಿಎಂ ಶ್ರೀ ಅಶ್ವಿನಿ ಕುಮಾರ್, ಮಂಗಳೂರು ನಗರದ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಎಂವಿಎಸ್ ಪ್ರಸಾದ್, ವಲಯದ ಸಿಬ್ಬಂದಿಗಳು, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮತ್ತು ನಗರ ಶಾಖೆಯ ಕಛೇರಿಯ ಸಿಬ್ಬಂದಿಗಳು ವಾಕಥಾನ್‍ನಲ್ಲಿ ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.