



ಉಡುಪಿ(: ಭೂಗತ ಪಾತಕಿ ಬನ್ನಂಜೆ ರಾಜನ ಸಹೋದರ ಅರುಣ್ ಕುಮಾರ್ (54) ಕಿಡ್ನಿ ವೈಫಲ್ಯದಿಂದ ಮಣಿಪಾಲದ ಇಂದು ನಿಧನ ಹೊಂದಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯ ವಿಲಾಸಿನಿ ಟೀಚರ್ ಮತ್ತು ಸುಂದರ್ ಶೆಟ್ಟಿಗಾರ್ ದಂಪತಿ ಮಗನಾದ ಅರುಣ್ ಕುಮಾರ್ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಇಂದು ಮುಂಜಾನೆ ಮಲ್ಪೆಯ ಬಾಪುತೋಟದ ಮನೆಯಲ್ಲಿ ಅನಾರೋಗ್ಯದಿಂದ ಅವರನ್ನು ಮಣಿಪಾಲ ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ ಹಾಗೂ ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ಅರುಣ್, ಕಿರಣ್ ಮತ್ತು ರಾಜ ಮೂವರು ಸಹೋದರರು. ಇವರಲ್ಲಿ ಕಿರಣ್ ಮೊದಲೇ ಸಾವನ್ನಪ್ಪಿದ್ದರು. ಈಗ ಅರುಣ್ ನಿಧನ ಹೊಂದಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.