logo
WhatsApp Image 2026-04-02 at 14.46.04.jpeg
hindalco everlast.jpeg

ಬಂಟ್ವಾಳ: ಶೆಡ್ ಕುಸಿದು ಬಿದ್ದು 1500 ಕೋಳಿಗಳು ಸಾವು..!

ಟ್ರೆಂಡಿಂಗ್
share whatsappshare facebookshare telegram
19 Jul 2024
post image

ಬಂಟ್ವಾಳ: ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಿರಂತರ ಗಾಳಿ ಮಳೆಗೆ ಕೋಳಿ ಸಾಕಣೆ ಮಾಡುವ ಶೆಡ್ ಏಕಾಏಕಿ ಕುಸಿದು ಬಿದ್ದ ಪರಿಣಾಮ ಸುಮಾರು ಒಂದುವರೆ ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವ ಅವರ ಮಾಲಕತ್ವದ ಶೆಡ್ ಇದಾಗಿದೆ.

ಸುಮಾರು 2,200 ಕೋಳಿಗಳನ್ನು ಅವರು ಸಾಕಣೆ ಮಾಡುತ್ತಿದ್ದರು. ಈ ಪೈಕಿ 700 ಕೋಳಿಗಳು ದೊಡ್ಡದಾಗಿದ್ದವು. ಈ ಹಿನ್ನೆಲೆ 700 ಕೋಳಿಗಳನ್ನು ಮಾರಾಟ ಮಾಡಲಾಗಿತ್ತು.

ಶೆಡ್ಡಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಹಿನ್ನೆಲೆ ಸುಮಾರು 1,500 ಕೋಳಿಗಳು ಅದರಡಿಗೆ ಬಿದ್ದು ಮೃತಪಟ್ಟಿದೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾಶವಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.