



ಸತತವಾಗಿ ಎರಡು ಪ್ರಮುಖ ಸರಣಿಗಳನ್ನು ಸೋತಿರುವ ಟೀಂ ಇಂಡಿಯಾದಲ್ಲಿ ಸರ್ಜರಿ ಕೆಲಸ ಆರಂಭವಾಗಿದೆ. ಅದರ ಪ್ರಯುಕ್ತ ಇಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಟೆಸ್ಟ್ ತಂಡದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅದರಲ್ಲಿ ಹಳಿತಪ್ಪಿರುವ ಟೆಸ್ಟ್ ತಂಡವನ್ನು ಮತ್ತೆ ಗೆಲುವಿನ ದಾರಿಗೆ ತರುವುದು ಹೇಗೆ ಎಂಬುದರ ಮೇಲೆ ಹೆಚ್ಚಿನ ಗಮನ ಕೊಡಲಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನು ಕೆಲವು ವರ್ಷಗಳು ಆಡುವ ಇಂಗಿತವಿರುವ ಆಟಗಾರರು ಕಡ್ಡಾಯವಾಗಿ ದೇಶಿ ಕ್ರಿಕೆಟ್ನಲ್ಲಿ ಅದರಲ್ಲೂ ರಣಜಿ ಟ್ರೋಫಿಯಲ್ಲಿ ಆಡಲೇಬೇಕೆಂಬ ಷರತ್ತು ವಿಧಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.