



ಕಾಪು: ಅಪರಿಚಿತ ವ್ಯಕ್ತಿಯ ಮಾತಿಗೆ ಮರುಳಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಘಟನೆ ಕಾಪು ತಾಲೂಕಿನ ಮೂಡುಫಲಿಮಾರು ಎಂಬಲ್ಲಿ ನಡೆದಿದೆ. ಶೋಭಾ ಆಚಾರ್ಯ ಅವರು ಮೂಡುಪಲಿಮಾರು ಎಂಬಲ್ಲಿ ತನ್ನ ತಾಯಿ, ಅಕ್ಕ ಮತ್ತು ತಮ್ಮನ ಜೊತೆ ವಾಸವಾಗಿದ್ದು, ಮೇ.6ರಂದು ಅಪರಿಚಿತ ವ್ಯಕ್ತಿಯೋರ್ವ ತನ್ನ ಹೆಸರು ಹರೀಶ್ ಪುತ್ತೂರು ವಿಶ್ವಕರ್ಮ ಕುಲದವರು ಎಂದು ಪರಿಚಯಿಸಿಕೊಂಡು ಬಂದಿದ್ದನು. ಅರ್ಧ ಗಂಟೆ ಮನೆಯಲ್ಲಿ ಇದ್ದು, ನಂತರ ಹೋಗಿದ್ದನು. ಆ ಬಳಿಕ ಎರಡು ದಿನ ಬಿಟ್ಟು ಅದೇ ವ್ಯಕ್ತಿಯು ಮದ್ಯಾಹ್ನದ ವೇಳೆ ಮತ್ತೆ ಮನೆಗೆ ಬಂದಿದ್ದು, ತನಗೆ ಸೇರಿದ ಕುಂದಾಪುರದಲ್ಲಿದ್ದ 80 ಲಕ್ಷ ರೂ. ಮೌಲ್ಯದ ಜಾಗವು ಮಾರಾಟವಾಗಿದೆ. ಅದರ ದಾಖಲೆಗಳು ಬ್ಯಾಂಕಿನಲ್ಲಿರುವುದರಿಂದ ಅದನ್ನು ಬಿಡಿಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಶೋಭಾ ಅವರು ಹಣ ಇಲ್ಲವೆಂದು ತಿಳಿಸಿದ್ದರು. ಆದರೆ ಶೋಭಾ ಹಾಗೂ ಅವರ ಅಕ್ಕ ಶ್ಯಾಮಲಾ ಅವರನ್ನು ನಂಬಿಸಿ 1,65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪಡೆದುಕೊಂಡು ಹೋಗಿದ್ದನು. ಚಿನ್ನದ ಹಣದ ಜೊತೆಗೆ ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಹೆಚ್ಚುವರಿಯಾಗಿ ಹಣ ಕೊಡುತ್ತೇನೆ ಎಂದು ನಂಬಿಸಿ ಮೇ.16 ರಂದು ಹೋಗಿದ್ದನು. ಬಳಿಕವೂ ಮನೆಗೆ ಬಂದು ಎರಡು ದಿನ ಮನೆಯಲ್ಲಿದ್ದು, ಆ ನಂತರ ಮನೆಯಿಂದ ಹೋದವನು ಈವರೆಗೂ ಬಂದಿಲ್ಲ. ಅಲ್ಲದೆ, ತೆಗೆದುಕೊಂಡು ಹೋದ ಚಿನ್ನಾಭರಣ ನೀಡಿದೆ ವಂಚಿಸಿದ್ದಾರೆ ಎಂದು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.