



ಬೆಳ್ತಂಗಡಿ: 25ರ ಹರೆಯದ ಯುವಕನೋರ್ವ ತನ್ನ ಮನೆಯಲ್ಲಿರುವಾಗ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ.
ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಗಳ ಪುತ್ರ ಪ್ರದೀಪ್ (25) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಈ ಘಟನೆ ಸೆ.8ರಂದು ನಡೆದಿದೆ.
ಮೃತ ಯುವಕನನ್ನು ಪ್ರದೀಪ್ ಎಂದು ಗುರುತಿಸಲಾಗಿದ್ದು, ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾದರೂ, ಜೀವ ಉಳಿಯಲಿಲ್ಲ ಎಂದು ವರದಿಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.