logo
WhatsApp Image 2026-04-02 at 14.46.04.jpeg
hindalco everlast.jpeg

ಬೆಳ್ತಂಗಡಿ: ಬಸ್‌ ಮತ್ತು ಬೈಕ್ ನಡುವೆ ಅಪಘಾತ: ಕಾಲೇಜು ವಿಧ್ಯಾರ್ಥಿ ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
3 Mar 2024
post image

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಬಸ್‌ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿ ಸಮೀಪ ಸಂಭವಿಸಿದೆ.

ಮೃತಪಟ್ಟ ವಿದ್ಯಾರ್ಥಿ ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ, ವಹೀದಾ ಅವರ ಪುತ್ರ ಮಂಗಳೂರಿನ ಯೇನಪೊಯ ಕಾಲೇಜಿನ ವಿಧ್ಯಾರ್ಥಿ ಸಿನಾನ್‌ (21) ಎಂದು ತಿಳಿದು ಬಂದಿದೆ.

ಬಡಕುಟುಂಬದ ಸಿನಾನ್‌ ಪಾರ್ಟ್‌ ಟೈಮ್‌ ಆಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅವರು, ವಿದ್ಯಾಭ್ಯಾಸವನ್ನು ತನ್ನ ಖರ್ಚಿನಿಂದಲೇ ನಿಭಾಯಿಸುತ್ತಿದ್ದರು. ಇದೇ ರೀತಿ ರಾತ್ರಿ ವೇಳೆ ಫುಡ್‌ ಡೆಲಿವರಿ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಕನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಸ್‌ ಬೈಕಿನ ಹ್ಯಾಂಡಲ್‌ಗೆ ತಾಗಿದೆ. ಪರಿಣಾಮ ಬೈಕ್‌ ಸವಾರ ಬಸ್ಸಿನಡಿಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರು ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.