



ಉಡುಪಿ: ಬೆಳ್ತಂಗಡಿಯ ಕಳೆಂಜ ಗ್ರಾಮದಲ್ಲಿ ವಲಯ ಅರಣ್ಯ ಅಧಿಕಾರಿ ಗಳ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದುರ್ವರ್ತನೆಯನ್ನು ಕರ್ನಾಟಕ ವರಣ್ಯ ಅರಣ್ಯಾಧಿಕಾರಿಗಳ ಸಂಘ ಖಂಡಿಸಿದೆಡಿಯ ಕಳೆಂಜ ಗ್ರಾಮದಲ್ಲಿ ವಲಯ ಅರಣ್ಯ ಅಧಿಕಾರಿ ಗಳ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದುರ್ವರ್ತನೆಯನ್ನು ಕರ್ನಾಟಕ ವರಣ್ಯ ಅರಣ್ಯಾಧಿಕಾರಿಗಳ ಸಂಘ ಖಂಡಿಸಿದೆ
ಮಂಗಳೂರು ವಿಭಾಗದ, ಉಪ್ಪಿನಂಗಡಿ ವಲಯದ, ಬೆಳ್ತಂಗಡಿ ತಾಲ್ಲೂಕಿನ, ಕಳೆಂಜ ಗ್ರಾಮದ, ಅಮ್ಮನ ನಿದ್ದೆ ವಿಕೃತ ಬ್ಲಾಕ್-2 ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಮಾನ್ಯ ಶಾಸಕರು, ಬೆಳ್ತಂಗಡಿ ಕ್ಷೇತ್ರರವರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಯನ್ನು ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿರುವುದು ಖಂಡನೀಯ, “ಆ” ಅವಾಚ್ಯ ಶಬ್ದದ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆ ವ್ಯಕ್ತಪಡಿಸದಿರುವುದು ಗೌರವಾನ್ವಿತ ಮಾನ್ಯ ಶಾಸಕರಿಗೆ ಶೋಭೆತರುವಂತಹುದಲ್ಲ, ಈ ಕೃತ್ಯವನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಯವರ ಸಂಘ (೨) ಬೆಂಗಳೂರು ಸಂಘವು ಕಠಿಣ ಹಬ್ಬಗಳಲ್ಲಿ ಖಂಡಿಸಿದೆ.
ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ, ಜನಪ್ರತಿನಿಧಿಗಳಾಗಲೀ
ಗೌರವಾನ್ವಿತ ಶಾಸಕರುಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗಿರುತ್ತದೆ. ಕಾನೂನಿಗಿಂತ ಯಾರೂ ಮಿಗಿಲಾಗಿರುವುದಿಲ್ಲ. ಒಂದು ವೇಳೆ ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯಚ್ಯುತಿ ಮಾಡಿದ್ದರೂ ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕಾಗಿರುವುದು ಶಾಸಕರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಆಗಿದ್ದಾಗ್ಯೂ ಮಾನ್ಯ ಗೌರವಾನ್ವಿತ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಶಾಸನ ಬದ್ಧ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿಉಂಟುಮಾಡಿ ಅವಾಚ್ಯವಾಗಿ ನಿಂಧಿಸಿರುವುದು ಅವರ ಘನತೆಗೆ ತಕ್ಕದ್ದಾಗಿರುವುದಿಲ್ಲ. ಈ ಘಟನೆಯನ್ನು ಸಂಘವು ಖಂಡಿಸುತ್ತಾ ಅರಣ್ಯ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಯವರಿಗೆ ಕಾನೂನಿನ ಅನ್ವಯ ಸಾರ್ವಜನಿಕ ಕೆಲಸ ನಿರ್ವಹಿಸಲು ನೈತಿಕ ಸೈರ್ಯವನ್ನು ಸಂಘವು ನೀಡುತ್ತದೆ. ಮುಂದೆ ಇಂತಹಘಟನೆ ಮರುಕಳಿಸಿದ್ದಲ್ಲಿ ಹೋರಾಟಕ್ಕೂ ಸಹ ಸಂಘವು ಸಿದ್ಧವಿರುತ್ತದೆ ಎಂದು ಈ ಮೂಲಕ ಸಂಘವು ಆಗ್ರಹಿಸುತ್ತದೆ.
ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ASSOCIATION ವಲಯ ಅರಣ್ಯ ಅಧಿಕಾರಿಗಳ ಸಂಘ(ರಿ)ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.