logo
WhatsApp Image 2026-04-02 at 14.46.04.jpeg
hindalco everlast.jpeg

ಬೆಳ್ವೆ :::: ಪತ್ನಿಗೆ ಕತ್ತಿಯಿಂದ ಹಲ್ಲೆಗೈದು ಜೀವಬೆದರಿಕೆ ಹಾಕಿದ ಪತಿರಾಯ

ಟ್ರೆಂಡಿಂಗ್
share whatsappshare facebookshare telegram
6 Aug 2022
post image

ಶಂಕರನಾರಾಯಣ: ಪತಿಯೇ ತನ್ನ ಪತ್ನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆಗೈದಿರುವ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಹೊನ್ಕಲ್‌‌ ಎಂಬಲ್ಲಿ ಆ.5ರಂದು ಮಧ್ಯರಾತ್ರಿ ನಡೆದಿದೆ. ಬೆಳ್ವೆ ಗ್ರಾಮದ ಹೊನ್ಕಲ್‌‌ ನಿವಾಸಿ 36ವರ್ಷದ ಜ್ಯೋತಿ ಹಲ್ಲೆಗೊಳಗಾದ ಮಹಿಳೆ. ಇವರ ಪತಿ ರವಿಚಂದ್ರ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದು, ಬಳಿಕ ಕತ್ತಿಯಿಂದ ಜ್ಯೋತಿಯವರಿಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಜ್ಯೋತಿ ಅವರ ಬಲಕೈಗೆ ಗಾಯವಾಗಿದೆ. ಬಳಿಕ ಅವರು, ಮನೆಯ ಪಕ್ಕದಲ್ಲಿರುವ ಅಕ್ಕನ ಮನೆಗೆ ರಕ್ಷಣೆಗಾಗಿ ಓಡಿ ಹೋಗಿದ್ದಾರೆ. ಆಗ ಪತಿ ರವಿಚಂದ್ರ 'ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.