



ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇ. 22ರಷ್ಟು ಹೆಚ್ಚಿಸಿದೆ.
ನಾಳೆಯಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ಶೇ. 22ರಷ್ಟು ದರ ಏರಿಕೆ ಆಗಲಿದೆ. ಈ ಸಂಬಂಧ ಹೆದ್ದಾರಿ ಎಕ್ಸ್‌ಪ್ರೆಸ್ ಹೈವೆಯಲ್ಲಿ ನೂತನ ದರದ ಪ್ರಕಟಣೆ ಹೊರಡಿಸಿದ್ದಾರೆ.
ಕಾರುಗಳ ಪರಿಷ್ಕೃತ ಟೋಲ್ ಶುಲ್ಕವು ಒಂದು ಬದಿಯ ಪ್ರಯಾಣಕ್ಕೆ 165 ರೂ. ಮತ್ತು ಅದೇ ದಿನದ ವಾಪಸಾತಿಗೆ 250 ರೂ. ಆಗಿದ್ದು, ಇದರ ಎರಡನೇ ವಿಸ್ತರಣೆಯ ನಂತರ 300 ರೂ. ಗೆ ಹೆಚ್ಚಾಗಬಹುದು ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 118 ಕಿ.ಮೀ ಎಕ್ಸ್‌ಪ್ರೆಸ್‌ವೇಯನ್ನು ಅನಾವರಣಗೊಳಿಸಿದ ಕೇವಲ 19 ದಿನಗಳ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಇದರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.