



ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಹನ ಸಂಚಾರವಿದ್ದ ರಸ್ತೆಯಲ್ಲೇ ತನ್ನ ಐಶಾರಾಮಿ ಬೆನ್ಝ್ ಕಾರನ್ನು ಡ್ರಿಫ್ಟ್ ಮಾಡಿದ್ದ ಕಾರಣಕ್ಕೆ 23 ರ ಹರೆಯದ ಯುವಕ ಪೋಲಿಸರ ಅತಿಥಿಯಾಗಿದ್ದಾನೆ.
ಇತ್ತೀಚೆಗೆ ಮಧ್ಯರಾತ್ರಿಯ ವೇಳೆ ಹೆದ್ದಾರಿಯಲ್ಲೇ ಯುವಕ ಕಾರನ್ನು ಡ್ರಿಫ್ಟ್ ಮಾಡಿದ್ದು ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬೆನ್ಝ್ ಕಾರೊಂದು ವೇಗವಾಗಿ ಬಂದು ಹೆದ್ದಾರಿ ಮಧ್ಯದಲ್ಲೇ ಸುತ್ತು ಹೊಡೆದಿದ್ದು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾರನ್ನು ಜಪ್ತಿ ಮಾಡಲಾಗಿದೆ. ಇದು ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದು ಹೀಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.