logo
WhatsApp Image 2026-04-02 at 14.46.04.jpeg
hindalco everlast.jpeg

ಬೆಟ್ಟದ ನೆಲ್ಲಿಯ ಟೀ: ಆರೋಗ್ಯಕ್ಕೆ ಹಿತ, ಸಿಕ್ಕರೆ ನೀವೂ ಕುಡಿದು ನೋಡಿ

ಟ್ರೆಂಡಿಂಗ್
share whatsappshare facebookshare telegram
16 Dec 2024
post image

ಬರಹ-ರಕ್ಷಿತಾ ಚಪ್ಪರಿಕೆ

ಬೆಟ್ಟದ ನೆಲ್ಲಿಕಾಯಿ ಎಂದರೆ ಜನರು ಒಮ್ಮೆ ಆಕರ್ಷಿತರಾಗುತ್ತಾರೆ. ಇದೇನು ಬೆಟ್ಟದ ನೆಲ್ಲಿಕಾಯಿ ಟೀ ಅಂತಿರಾ ಶುಗರ್, ಬಿಪಿ, ನಿದ್ರಾಹೀನತೆ, ಗ್ಯಾಸ್ಟಿಕ್, ಮಲಬದ್ಧತೆ, ರಕ್ತ ಶುದ್ಧೀಕರಣ, ಜೀರ್ಣಾಂಗ ವ್ಯವಸ್ಥೆ, ಕೊಲೆಸ್ಟ್ರಾಲ್ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗೆ ರಾಮಬಾಣ ಈ ಬೆಟ್ಟದ ನೆಲ್ಲಿಕಾಯಿ ಟೀ.

200ಮಿಲಿ ಲೀಟರ್ ನೀರಿಗೆ ಅರ್ಧ ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಮತ್ತು ಸ್ವಲ್ಪ ಸೈಂದ್ರ ಲವಣ ಸ್ವಲ್ಪ ಪ್ರಮಾಣದ ಜೇನುತುಪ್ಪ ಮಿಶ್ರಣ ಮಾಡಿ ಮೂರು ತಿಂಗಳು ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎಲ್ಲಾ ದೇಹದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸೋಮನಾಥ್ ಬೆಂಗಳೂರು ಹಾಗೂ ಅವರ ತಾಯಿ ಪ್ರಮೀಳಾ ಬೆಂಗಳೂರು ಹೇಳುತ್ತಾರೆ. ಅಂದ ಹಾಗೆ ಇವರು ರಾಜ್ಯದ ವಿವಿದೆಡೆ ವಿಶೇಷ ಸಮಾರಂಭ, ಫೆಸ್ಟ್, ಸಮ್ಮೇಳನ, ಜಾತ್ರೆಗಳ ಸಂದರ್ಭ, ಬೆಟ್ಟದ ನೆಲ್ಲಿಕಾಯಿಯ ಟೀ ಮತ್ತು ಪುಡಿಗಳನ್ನು ಮಾರುತ್ತಾರೆ.

ಇವರು ನಾಲ್ಕು ತಿಂಗಳು ಬೆಟ್ಟದ ನೆಲ್ಲಿಕಾಯಿ ಬೀಜ ಬೇರ್ಪಡಿಸಿ ಒಣಗಿಸಿ ಇಡಲಾಗುತ್ತದೆ ಅನಂತರ ಅದನ್ನು ಪುಡಿ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ. ಹಲವಾರು ಜನರು ಇದರ ಉಪಯೋಗ ತಿಳಿದುಕೊಂಡು ಖರೀದಿಸುತ್ತಿರುವುದು ವಿಶೇಷ. ಮೊನ್ನೆ ಆಳ್ವಾಸ್ ವಿರಾಸತ್ ಸಂದರ್ಭದಲ್ಲಿಯೂ ಇವರ ಟೀ ಪುಡಿ ಮತ್ತು ನೆಲ್ಲಿ ಟೀಗೆ ಒಳ್ಳೆಯ ಬೇಡಿಕೆ ಇತ್ತು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.