



ಹೈದರಾಬಾದ್: ಜೂಜಿನ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ 12 ವರ್ಷದಲ್ಲಿ ಬರೋಬ್ಬರಿ 100 ಕೋಟಿ ರೂ. ಕಳೆದುಕೊಂಡ ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದೆ.
ಈ ಸಂಬಂಧ ಇಬ್ಬರು ಬುಕ್ಕಿ ಮತ್ತು ಕಲೆಕ್ಷನ್ ಏಜೆಂಟ್‌ನನ್ನು ಎಲ್ಬಿ ನಗರ ಸ್ವಾಟ್ ಪೊಲೀಸರು ಬಂಧಿಸಿದ್ದಾರೆ.
ನಗರದ ವನಸ್ಥಲಿಪುರಂನ ರಿಯಲ್ ಎಸ್ಟೇಟ್ ಉದ್ಯಮಿ ಅಶೋಕ ರೆಡ್ಡಿ ನೂರು ಕೋಟಿ ಹಣ ಕಳೆದುಕೊಂಡ ವ್ಯಕ್ತಿ.
ಎಷ್ಟೇ ನಷ್ಟ ಅನುಭವಿಸಿದರೂ ಕ್ರಿಕೆಟ್ ಬೆಟ್ಟಿಂಗ್ ಮುಂದುವರೆಸಿದ. ಇದಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗಳಿಕೆ ಮಾಡಿದ ಎಲ್ಲ ಹಣವನ್ನು ಬೆಟ್ಟಿಂಗ್‌ಗೆ ತಂದು ಸುರಿದ. ಇದು ಸಾಲದಾದಾಗ ಈತ ಸಂಬಂಧಿಕರು ಮತ್ತು ಪರಿಚಯಸ್ಥರಿಂದ ಹಣ ಕೇಳಲು ಶುರು ಮಾಡಿದ. ಈ ರೀತಿ ಹಣ ಕಳೆದುಕೊಂಡು ಕಂಪನಿ ನಷ್ಟ ಅನುಭವಿಸಿದ ಕಾರಣ ಇದೀಗ ತನ್ನ ಕಂಪನಿ ದಿವಾಳಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾನೆ ಎಂದು ರಾಚಕೊಂಡಾ ಕಮಿಷನರ್ ಡಿಎಸ್ ಚೌಹಾಣ್ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.