logo
WhatsApp Image 2026-04-02 at 14.46.04.jpeg
hindalco everlast.jpeg

ಭಾರತ್ ಬಂದ್: ದ.ಕ. ಸಹಿತ ಕರಾವಳಿಯಲ್ಲಿ ಬೆಂಬಲ ಇಲ್ಲ; ಮಾಮೂಲಿ ವಾಹನ ಓಡಾಟ, ಸಹಜ ಜನಜೀವನ; ಕೆಲವು ಕಡೆ ಪ್ರತಿಭಟನೆ

ಟ್ರೆಂಡಿಂಗ್
share whatsappshare facebookshare telegram
27 Sept 2021
post image

ಮಂಗಳೂರು; ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್ ಗೆ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ವಾಹನ ಸಂಚಾರ ಮಾಮೂಲಿಯಾಗಿದೆ. ಜನಜೀವನ ಸಹಜ ಸ್ಥಿತಿಯಲ್ಲಿದೆ. ಮಂಗಳೂರಿನಲ್ಲಿ ಸಿಟಿ ಬಸ್, ಸರ್ವಿಸ್ ಬಸ್, ಕೆಎಸ್ಸಾರ್ಟಿಸಿ, ಆಟೋ, ಟ್ಯಾಕ್ಸಿ ರೋಡಿಗಿಳಿದಿವೆ. ಅಂಗಡಿ- ಮುಂಗಟ್ಟು ತೆರೆದುಕೊಂಡಿವೆ. ವ್ಯಾಪಾರ - ವಹಿವಾಟು ಎಂದಿನಂತೆ ಸಾಗುತ್ತಿದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಚೇರಿ ತೆರೆದುಕೊಂಡಿವೆ. ಆದರೆ ಜಿಲ್ಲೆಯ ಹಲವೆಡೆ ಕಾಂಗ್ರೆಸ್, ಎಡಪಕ್ಷ, ಪಾಪ್ಯುಲರ್ ಫ್ರಂಟ್ ಸೇರಿದಂತೆ ಸಮಾನಮನಸ್ಕ ಪಕ್ಷಗಳು ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿದವು. ಒಕ್ಕೂಟ ಸರ್ಕಾರವು ವಿವಾದಿತ ಕೃಷಿ ಕಾನೂನು ಜಾರಿಗೆ ತಂದು ಒಂದು ವರ್ಷವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ರಾಜಧಾನಿ ದಿಲ್ಲಿಯ ಗಡಿಯಲ್ಲಿ ಪ್ರತಿಭಟನಾ ನಿರತವಾಗಿವೆ. ಲಕ್ಷಾಂತರ ಸಂಖ್ಯೆಯ ರೈತಾಪಿ ವರ್ಗಗಳು ಸುಮಾರು ಒಂದು ವರ್ಷದಿಂದ ವಿರೋಧ ಪ್ರದರ್ಶನ ನಡೆಸುತ್ತಿದ್ದಾರೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.