



ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೋಮವಾರ ಚಿತ್ರದುರ್ಗ ಪ್ರವೇಶಿಸಿದ್ದು, ಕೋಟೆ ನಾಡಿನಲ್ಲಿ ಭಾರೀ ಸ್ವಾಗತ ಕೋರಲಾಯಿತು. ಚಿತ್ರದುರ್ಗದ ಹಿರಿಯೂರಿನ ಹುಳಿಯಾರ್ ರಸ್ತೆಯಿಂದ ರಾಹುಲ್ ಗಾಂಧಿ ಅವರು ಭಾರೀ ಜನಸ್ತೋಮದೊಂದಿಗೆ ಹೆಜ್ಜೆ ಹಾಕಿದರು. ಬೋಲೋ ಭಾರತ್ ಮಾತಾ ಕೀ ಜೈ ಘೋಷಣೆ ಎಲ್ಲೆಡೆ ಮೊಳಗಿತು. ಇದರ ಜತೆಗೆ ರಾಹುಲ್ ಗಾಂಧಿ ಕೀ ಜೈ, ಕಾಂಗ್ರೆಸ್ ಪಾರ್ಟಿ ಕೀ ಜೈ ಘೋಷಣೆ ಕೂಡ ಮುಗಿಲು ಮುಟ್ಟಿತು. ಲಂಬಾಣಿ ಮಹಿಳೆಯರ ನೃತ್ಯ, ಗೊರವ ಕುಣಿತ, ವಿವಿಧ ವಾದ್ಯ ಸಂಗೀತ ಹಾಗೂ ಕುಂಭಮೇಳದೊಂದಿಗೆ ರಾಹುಲ್ ಅವರಿಗೆ ಸ್ವಾಗತ ಕೋರಲಾಯಿತು. ಹುಳಿಯಾರ್ ಪ್ರಧಾನ ರಸ್ತೆಯ ಮೂಲಕ ರಾಹುಲ್ ಅವರು ಇಂದು ವಾಸ್ತವ್ಯವಿರುವ ಹರ್ತಿಕೋಟೆಗೆ ಭಾರತ್ ಜೋಡೋ ಪಾದಯಾತ್ರೆ ಮುಂದುವರಿಯಿತು. ರಾಹುಲ್ ಗಾಂಧಿ ಅವರ ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕಲು ನೂರಾರು ಬಸ್ ಗಳಲ್ಲಿ ಜನರು ಆಗಮಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.