logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬ

ಟ್ರೆಂಡಿಂಗ್
share whatsappshare facebookshare telegram
23 May 2024
post image

ಸುರಕ್ಷಾ ಪತ್ರಿಕೋಧ್ಯಮ ವಿಭಾಗ ಎಂ. ಪಿ. ಎಂ. ಕಾಲೇಜು ಕಾರ್ಕಳ

ತುಳುನಾಡಿನ ಅಚ್ಚುಮೆಚ್ಚಿನ ಜನಪದ ಕ್ರೀಡೆ ಕಂಬಳ , ಹಾಗೆಯೇ ಈ ಕ್ರೀಡೆಯಲ್ಲಿ ಕರಾವಳಿ ಜನಗಳ ಬದುಕು,ಪ್ರತಿಷ್ಠೆ ಅಡಗಿದೆ. ಕಂಬಳ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರನ್ನು ಪಡೆದವರಲ್ಲಿ ಗುಣ ಪಾಲ ಕಡಂಬರು ಮೊದಲ ಸಾಲಿನಲ್ಲಿ ಸಿಗುತ್ತಾರೆ. ಕೂಡ ಒಬ್ಬರು. ಈ ಕ್ಷೇತ್ರದಲ್ಲಿ ಸಾಧನೆಗೆ ಕಂಬಳದ ಸಾಧಕರಿಗೆ ಮಾರ್ಗದರ್ಶಿಯಾಗಿ  ಗುರುತಿಸಿದ ಹಿರಿಯರಾಗಿದ್ದಾರೆ..  ಕುಟುಂಬವು ಕೃಷಿ ಮೂಲದ್ದಾದ್ದರಿಂದ ಕಂಬಳ ಕ್ಷೇತ್ರದ ಮೇಲೆ ಒಲವು ಮೂಡಿತು. ಕಂಬಳ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲೂ ಒಲವು ನೀಡಿದ್ದಾರೆ. ತುಳುನಾಡಿನ ಅಚ್ಚುಮೆಚ್ಚಿನ ಜನಪದ ಕ್ರೀಡೆ ಕಂಬಳ , ಹಾಗೆಯೇ ಈ ಕ್ರೀಡೆಯಲ್ಲಿ ಕರಾವಳಿ ಜನಗಳ ಬದುಕು,ಪ್ರತಿಷ್ಠೆ ಅಡಗಿದೆ. ಕಂಬಳ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರನ್ನು ಪಡೆದವರಲ್ಲಿ ಗುಣ ಪಾಲ ಕಡಂಬರು ಮೊದಲ ಸಾಲಿನಲ್ಲಿ ಸಿಗುತ್ತಾರೆ. ಕೂಡ ಒಬ್ಬರು. ಈ ಕ್ಷೇತ್ರದಲ್ಲಿ ಸಾಧನೆಗೆ ಕಂಬಳದ ಸಾಧಕರಿಗೆ ಮಾರ್ಗದರ್ಶಿಯಾಗಿ  ಗುರುತಿಸಿದ ಹಿರಿಯರಾಗಿದ್ದಾರೆ..  ಕುಟುಂಬವು ಕೃಷಿ ಮೂಲದ್ದಾದ್ದರಿಂದ ಕಂಬಳ ಕ್ಷೇತ್ರದ ಮೇಲೆ ಒಲವು ಮೂಡಿತು. ಕಂಬಳ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲೂ ಒಲವು ನೀಡಿದ್ದಾರೆ.

ಕಡಂಬರ ಶಿಕ್ಷಣದ ಮೇಲಿನ ಒಲವು :-                      ಕಡಂಬರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣವನ್ನು ಆ ಕಾಲದಲ್ಲಿಯೇ ಮುಗಿಸಿರುವ ಗರಿಮೆ ಇವರಿಗಿದೆ. ಇವರು ಈ ಶಿಕ್ಷಣವನ್ನು ಕಾರ್ಕಳದ ಭುಜದಲ್ಲಿ ಬ್ರಹ್ಮಚರ್ಯ ಆಶ್ರಮ, ಕಾರ್ಕಳದ ಬೋರ್ಡ್ ಹೈ ಸ್ಕೂಲ್, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು , ಡಿ ಬಿ ಎಸ್ ಕಾಲೇಜು , ಮಾನಸಗಂಗೋತ್ರಿ ಈ ಎಲ್ಲಾ ಕಾಲೇಜು ಗಳಲ್ಲಿ ಮುಗಿಸಿದರು. ಇವರಿಗೆ ಎನ್‌ಸಿಸಿಯಲ್ಲಿ ವಿಶೇಷ ಆಸಕ್ತಿ ಇದ್ದ ಕಾರಣ 1968ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ರೆಗ್ಯುಲರ್ ಆರ್ಮಿ ಅಟ್ಯಾಕ್ ಸ್ಪರ್ಧೆಯಲ್ಲಿ ಗೆ  ಆಯ್ಕೆಯಾದರು.  1969ರಲ್ಲಿ ದೆಹಲಿಯ ಗಣರಾಜ್ಯ ಪಿರೇಡ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು.                        ಗುಣ ಪಾಲ್ ಕಡಂಬರು ಪ್ರಾಧ್ಯಾಪಕರಾಗಿ ಹಾಗೆಯೇ ಪ್ರಾಂಶುಪಾಲರಾಗಿಯು ತಮ್ಮ ಕಾರ್ಯವನ್ನು ನೀಡಿದ್ದಾರೆ. ಹಾಗೆಯೇ ಇವರು ನಾಲ್ಕೂರು ನರಸಿಂಹರಾವ್ ಸ್ಮಾರಕ ಪ್ರೌಢಶಾಲೆಯನ್ನು ನಿರ್ಮಿಸಿದ್ದಾರೆ. ಈ ಪ್ರೌಢಶಾಲೆಯ ನಿರ್ಮಾಣಕ್ಕೆ 10 ಎಕರೆ ತಮ್ಮದೇ ಜಾಗವನ್ನು ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹಾಗೆಯೇ ಈ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದವರನ್ನು ಗುರುತಿಸಿ ಕಡಂಬರವರ  ಶ್ರೀ ಮತಿ ಬಂಗಾರದ ಪದಕವನ್ನು ನೀಡಿ ಗೌರವಿಸುತ್ತಿದ್ದರು. ಅವರು ಸ್ವರ್ಗಸ್ಥರಾದ ಕಾರಣ ನಂತರ ಆ ಪದಕವನ್ನು ಅವರ ನೆನಪಿಗಾಗಿ ಈಗಲೂ ನೀಡಲಾಗುತ್ತಿದೆ.

ಗುಣಪಲ್ ಕಡಂಬರ ಕಂಬಳದ ಹಾದಿ :-                         ಗುಣ ಪಾಲ್ ಕಡಂಬರು ವಿದ್ಯಾಭ್ಯಾಸ ನಡೆಸುವ ಸಮಯ, ಗುಣಪಲ್ ಜೈನ್ ಹಾಗೂ ಧರ್ಮರಾಜನ್ ಅವರು ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ದಿಡಿಂಬಿರಿಯ ದೇವಸ್ಥಾನದ ಧ್ವಜಸ್ತಂಬಕ್ಕೆ ತಾಮ್ರ ಹೊದಿಕೆ ಹಾಕುವ ಉದ್ದೇಶದಿಂದ 1970ರಲ್ಲಿ ಬಜಗೋಳಿಯಲ್ಲಿ ಲವಕುಶ ಜೋಡುಕೆರೆ ಕಂಬಳವನ್ನು ಟಿಕೇಟಿನ ಮೂಲಕ ಸಂಘಟಿಸಲಾಯಿತು. ಆ ಸಮಯದಲ್ಲಿ ಇವರು ಅಲ್ಲಿ ಇದ್ದುದರಿಂದ ಗುರುಗಳು ಎಂದು ಹೇಳುವ ಭುಜಬಲಿ ಬಂಗರು "ಬಲ ಮೈಕ್ ಪತ್ತ್"  ಹೇಳಿದ್ದರಿಂದ  ಈ ಕಂಬಳದ ಮಾರ್ಗಕ್ಕೆ ಸ್ಫೂರ್ತಿಯಾದರು. ಬಜಗೋಳಿಯ ಕಂಬಳವು ಕಂಬಳ ಕ್ಷೇತ್ರದಲ್ಲಿ ಮಹತ್ತರವಾದ ತಿರುವು ಕೊಟ್ಟಂತದ್ದಾಗಿದೆ. ಏಕೆಂದರೆ ಹಿಂದೆ ಕನೆಹಲಗೆ ಮತ್ತು ಹಗ್ಗ ಎನ್ನುವಂತಹ ಎರಡೇ ವಿಭಾಗವಿತ್ತು. ಆ ಸಮಯದಲ್ಲಿಯೇ ಬಜಗೋಳಿಯ ಕಂಬಳದಲ್ಲಿ ಅಡ್ಡಹಲಗೆ ಮತ್ತು ನೇಗಿಲು ವಿಭಾಗವನ್ನು ಜಾರಿಗೆ ತಂದರು.2011 ರಲ್ಲಿ ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಸಂಸ್ಥೆಯನ್ನು ರಚಿಸಿ ಅದರ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಹಾಗೆಯೇ ಇವರಿಗೆ ಕಂಬಳ ಕ್ಷೇತ್ರದಲ್ಲಿ ಕಂಬಳದ ಭೀಷ್ಮ ಎಂಬ ಹೆಸರು ಒಲಿಯಿತು..  50 ರಿಂದ 53 ವರ್ಷಗಳ ಕಂಬಳದ ನಂಟು ಇದೆ.

ಮಾದರಿ ಕೃಷಿಕ ಗುಣಪಾಲ್ ಕಡಂಬ :-                     ಗುಣಪಾಲ್ ಕಡಂಬರು ದೊಡ್ಡ ಕೃಷಿಕ ಕುಟುಂಬವಾದ ಕೊಳಕೆ ಕುಟುಂಬದವರು.ಹೀಗಾಗಿ ಇವರಿಗೆ ಕೃಷಿಯ ಮೇಲೆ ಮೊದಲೇ ಆಸಕ್ತಿ ಇತ್ತು. ನಂತರ ಇವರಿಗೆ 1978ರಲ್ಲಿ ಕಾರ್ಕಳದ ಶಿರ್ಲಾಲು ಗ್ರಾಮದಲ್ಲಿ ಭೂಮಿ ದೊರೆಯಿತು. ಅವರು ಅಲ್ಲಿ ಸಣ್ಣ ಮಟ್ಟದ ಕೃಷಿ ಮಾಡಿದರು. ಅಲ್ಲಿನ ನೀರಾವರಿ ಸಮಸ್ಯೆ ನಿವಾರಿಸಲು ಸೈಕಲ್ ಪಿನ್ ನೀರಾವರಿಯನ್ನು ಅಳವಡಿಸಿ ಅದರಿಂದ ಕೃಷಿ ನಡೆಸಿದರು. ಇದನ್ನು ಇಲಾಖೆಯವರು ಮೆಚ್ಚಿಕೊಂಡಿದ್ದರಿಂದ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಇದರ ಬಗ್ಗೆ ತಿಳಿಸಲು ಪಿ ಪಿ ಟಿ ಪ್ರೆಸೆಂಟೇಷನ್ ಮಾಡುವ ಅವಕಾಶ ದೊರೆಯಿತು. ನಂತರದ ಸಮಯದಲ್ಲಿ ಕೃಷಿ ಹೊಂಡವನ್ನು ಮಾಡಿ ಕೃಷಿಗಾಗಿ ನೀರನ್ನು ಪಡೆದು ಒಳ್ಳೆಯ ಬೆಳೆ ತೆಗೆದರು. ಈಗೀನ ಈ ಸಮಯದಲ್ಲಿ ಜಾಯಿಕಾಯಿ, ಎಗ್ ಪ್ರೂಟ್, ರಾಂಬೊಟಾನ್, ಚಿಕ್ಕು, ಮಾವು, ಲಿಂಬು, ಪೇರಳೆ, ನೆಲ್ಲಿಯಂತಹ  ಹಲವಾರು ಬೆಳೆಗಳನ್ನು ಬೆಳೆದು ಮಾದರಿ ಕೃಷಿಕರಾದರು.

                       ಮೊದಲ ಪ್ರಶಂಸೆ ಪಡೆದ ಖುಷಿ ಹಾಗೂ  ಬೇರೆ ಎಲ್ಲಿಯೂ ಸಿಗುವುದಿಲ್ಲ. ಈ ಜೀವನ ತನಗೆ ತೃಪ್ತಿ ನೀಡಿದೆ ಎನ್ನುತ್ತಾರೆ ಗುಣಪಾಲ್ ಕಡಂಬರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.