logo
WhatsApp Image 2026-04-02 at 14.46.04.jpeg
hindalco everlast.jpeg

Big News: : ನಕ್ಸಲ್ ಜತೆ ಸಂಬಂಧ ಆರೋಪ: ವಿಠಲ ಮಲೆಕುಡಿಯ ನಿರ್ದೋಷಿ; ನ್ಯಾಯಾಲಯ ತೀರ್ಪು: 9 ವರ್ಷಗಳ ಸುದೀರ್ಘ ಕಾನೂನು ಹೋರಾಟ

ಟ್ರೆಂಡಿಂಗ್
share whatsappshare facebookshare telegram
21 Oct 2021
post image

ಮಂಗಳೂರು: ನಕ್ಸಲ್ ಜತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಸುಮಾರು 4 ತಿಂಗಳು ಬಂಧನದಲ್ಲಿದ್ದು, ಜಾಮೀನು ಮೇಲೆ ಬಿಡುಗಡೆಗೊಂಡಿರುವ

ವಿಠಲ ಮಲೆಕುಡಿಯ ಅವರನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ. 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಗುರುವಾರ ಈ ಕುರಿತು ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಕತ್ಲೂರು ಗ್ರಾಮ ವಿಠಲ ಮಲೆಕುಡಿಯ ಅವರನ್ನು ನಕ್ಸಲರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ 2012 ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು. ವಿಠಲ ಜತೆ ಅವರ ತಂದೆ ಅವರನ್ನು ಕೂಡ ದಸ್ತಗಿರಿ ಮಾಡಲಾಗಿತ್ತು. ಸುಮಾರು 4 ತಿಂಗಳು ಸೆರೆಮನೆ ವಾಸ ಅನುಭವಿಸಿದ ಜನರ್ಲಿಸಂ ವಿದ್ಯಾರ್ಥಿಯಾದ ವಿಠಲ ಮಲೆಕುಡಿಯ ಅವರು ನಂತರ ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು. ಅಂದಿನ ಸರಕಾರ ವಿಠಲ ಮಲೆಕುಡಿಯ ಅವರ ಮೇಲೆ ಸಾಕಷ್ಟು ಸಾಕ್ಷ್ಮಾಧಾರ ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಡುವುದಾಗಿ ಹೇಳಿತ್ತು. ಈ ನಡುವೆ ಬೆಳ್ತಂಗಡಿ ಪೊಲೀಸರು ವಿಠಲ ಮಲೆಕುಡಿಯ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. 2012ರಿಂದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ವಿಠಲ ಮಲೆಕುಡಿಯ ಅವರ ಕತ್ಲೂರು ಮನೆಯಲ್ಲಿ ದೊರಕಿದ 21 ಸಾವಿರ ರೂ. ನಗದನ್ನು ನಕ್ಸಲ್ ಚಟುವಟಿಕೆಗಾಗಿ ಗ್ರಾಮಸ್ಥರಿಂದ ಸಂಗ್ರಹಿಸಿದ ಹಣ ಎಂದು ಪೊಲೀಸರು ಆರೋಪಿಸಿದ್ದರು. ಆದರೆ

ವಿಠಲ ಮಲೆಕುಡಿಯ ಅವರು ಇದು ತನ್ನ ತಂದೆ - ತಾಯಿ ದುಡಿದ ಹಣ. ಅಪ್ಪ ಅಮ್ಮನಿಗೆ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಮನೆಯಲ್ಲೇ ಉಳಿತಾಯ ಮಾಡಿ ಕೂಡಿಟ್ಟ ಹಣ ಎಂದು ಸ್ಪಷ್ಟನೆ ನೀಡಿದ್ದರು. ನಂತರ ವಿಠಲ ಅವರು ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸಿದ್ದರು. ನಾರಾವಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್ ನಿಂದ ಸ್ಪರ್ಧಿಸಿದ್ದರು.

ಇದೀಗ ಪ್ರಕರಣ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪೂರ್ಣಗೊಂಡಿದ್ದು, ಇಂದು ತೀರ್ಪು ಹೊರಬಿದ್ದಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.