



ಒಸಿಐ ಮಾನ್ಯತೆ ರದ್ದು ಹಿನ್ನೆಲೆಯಲ್ಲಿ ಗಡೀಪಾರು ಭೀತಿಯಲ್ಲಿದ್ದ ನಟ ಚೇತನ್‌ಗೆ ಹೈಕೋಟ್‌ರ್ನಿಂದ ಷರತ್ತುಬದ್ಧ ರಿಲೀಫ್ ದೊರೆತಿದೆ.
ನ್ಯಾ. ಎಂ ನಾಗಪ್ರಸನ್ನರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ನಟ ಚೇತನ್‌ಗೆ 2018ರಲ್ಲಿ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಚೇತನ್ ಕೆಲವೊಂದು ಹೇಳಿಕೆಗಳು ಹಾಗೂ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಟೀಕೆ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿ ಉತ್ತರ ಪಡೆದಿತ್ತು.
ಆ ನೋಟೀಸ್ ಗೆ ಚೇತನ್ ರವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು.
ಆದರೆ ಚೇತನ್ ಪರ ವಕೀಲರು, ಚೇತನ್ ವಾದವನ್ನು ಒಮ್ಮೆ ಆಲಿಸಿ ನಂತರದಲ್ಲಿ ತೀರ್ಪನ್ನು ನೀಡಬೇಕೆಂದು ವಾದ ಮಂಡಿಸಿದ್ದರು.
ಎರಡು ಕಡೆಯ ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್ ನಟ ಚೇತನ್‌ಗೆ ಷರತ್ತುಬದ್ಧ ರಿಲೀಫ್ ನೀಡಿದೆ. ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವಿಟ್ ಮಾಡುವಂತಿಲ್ಲ. ವಿಚಾರಣೆಗೆ ಬಾಕಿಯಿರುವ ಕೇಸ್‌ಗಳ ಬಗ್ಗೆಯೂ ಟ್ವಿಟ್ ಮಾಡುವಂತಿಲ್ಲ ಎಂದ ಕೋರ್ಟ್ ಜೂ. 2ರವರೆಗೆ ನಟ ಚೇತನ್ ವಿರುದ್ಧ ಕ್ರಮ ಬೇಡ ಎಂದು ಆದೇಶ ನೀಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.