



ಚೆನ್ನೈ: ತಮಿಳು ನಟ ವಿಶಾಲ್ ಸಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
21.29 ಕೋಟಿ ರೂ. ಸಾಲ ಪಡೆದ ವಿಚಾರವಾಗಿ ನಟ ವಿಶಾಲ್‌ಗೆ ಮದ್ರಾಸ್ ಹೈಕೋರ್ಟ್‌ನಿಂದ ನೋಟಿಸ್ ಜಾರಿಯಾಗಿದೆ.
ತಮ್ಮ ಫಿಲ್ಟ್ ಫ್ಯಾಕ್ಟರಿಯ ಮೂಲಕ ಸಿನಿಮಾ ನಿರ್ಮಾಣಕ್ಕಾಗಿ ವಿಶಾಲ್, ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನಿಂದ ಸಾಲ ಪಡೆದಿದ್ದರು. ಆದರೆ, ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೈಕಾ ಸಂಸ್ಥೆಯು ವಿಶಾಲ್ ಮೇಲೆ ದೂರನ್ನು ದಾಖಲಿಸಿತ್ತು.
ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, 15 ಕೋಟಿ ಪಾವತಿ ಮಾಡದ ಹೊರತು ವಿಶಾಲ್ ಯಾವುದೇ ಸಿನಿಮಾ ರಿಲೀಸ್ ಮಾಡದಂತೆ ತೀರ್ಪು ನೀಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.