



ಬೆಂಗಳೂರು, 14 ಸೆಪ್ಟೆಂಬರ್ 2022: ಬಿಗ್ ಬಾಸ್ ಕನ್ನಡದ ಮೊದಲ OTT ಸೀಸನ್ ತನ್ನ ಮಹತ್ವದ ಪ್ರಯಾಣದ ಅಂತಿಮ ಹಂತದಲ್ಲಿದೆ. ರೋಮಾಂಚನಕಾರಿ ಫೈನಲ್ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗುತ್ತಿದ್ದಂತೆ, ಪ್ರದರ್ಶನದ ಈ ಮೊದಲಿನ ಕೆಲವು ಸ್ಪರ್ಧಿಗಳು ಈ ಕಾರ್ಯಕ್ರಮದ ಸಿಂಹಾವಲೋಕನ ಮಾಡಿದ್ದಾರೆ ಮತ್ತು ಒಟ್ಟಾರೆ ಪಯಣದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಯಾರು ಈ ಶೋ ಗೆದ್ದು ಟ್ರೋಫಿಯನ್ನು ಮನೆಗೊಯ್ಯುತ್ತಾರೆಂದೂ ಊಹಿಸಿದ್ದಾರೆ!
ಸೋಮಣ್ಣ ಅವರು ಸ್ವತಂತ್ರವಾಗಿ ಆಡುತ್ತಿರುವುದರಿಂದ ಮತ್ತು ಉತ್ತಮ ಕೆಲಸ ಮಾಡುತ್ತಿರುವುದರಿಂದ ಅವರ ಗೆಲುವಿಗೆ ಅಪಾರ ಅವಕಾಶವಿದೆ ಎಂದು ಇತ್ತೀಚೆಗೆ ಎಲಿಮಿನೇಟ್ ಆಗಿರುವ ನಟಿ ಮತ್ತು ನಿರ್ಮಾಪಕಿ ಚಿತ್ರಾ ಹಳ್ಳಿಕೇರಿ ಭಾವಿಸುತ್ತಾರೆ.
ಮನೆಯಲ್ಲಿ ಯಾರಿಗೆ ಉತ್ತಮ ತಂತ್ರವಿದೆ ಎಂದು ಕೇಳಿದಾಗ, ಚಿತ್ರಾ ಹೇಳಿದ್ದಿಷ್ಟು: "ನಾವು ತಂತ್ರದ ಬಗ್ಗೆ ಮಾತನಾಡುವಾಗ, ರಾಕೇಶ್ ಅವರು ಇಡೀ ಶೋದಲ್ಲಿ ಸ್ಥಿರವಾಗಿ ಉಳಿದಿದ್ದಾರೆ ಮತ್ತು ನನ್ನ ಪ್ರಕಾರ ಅದೇ ಅವರ ದೊಡ್ಡ ಶಕ್ತಿಯಾಗಿದೆ." ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಚೈತ್ರ , "ಬಿಗ್ ಬಾಸ್ OTT ಕನ್ನಡ ಸೀಸನ್ 1 ಜೀವನದ ಪ್ರತಿಯೊಂದು ಹಂತದ ಜನರ ಜೊತೆಗೆ ಬೆರೆಯಲು ಅವಕಾಶ ನೀಡಿದ್ದು, ಅದ್ಭುತ ಅನುಭವವಾಗಿದೆ" ಎಂದರು.
ಬಿಗ್ ಬಾಸ್ ಮನೆಯಿಂದ ಹೊರಬಿದ್ದವರಲ್ಲಿ ಮೊದಲಿಗರಾದ ರೂಪದರ್ಶಿ ಮತ್ತು ನಟಿ ಕಿರಣ್ ಯೋಗೇಶ್ವರ್ ಹೇಳಿದರು, "ರಾಕೇಶ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಏಕೆಂದರೆ, ಅವರು ತುಂಬಾ ಸ್ಮಾರ್ಟ್ ಮತ್ತು ತಮ್ಮ ಆಟದಲ್ಲಿ ಚೆನ್ನಾಗಿದ್ದಾರೆ. ಸ್ಪರ್ಧೆಯ ವಿಷಯದಲ್ಲಿ, ತಂತ್ರ ಮತ್ತು ಪ್ರೇಕ್ಷಕರ ಮೇಲೆ ಸಾನಿಯಾ ಉತ್ತಮ ನಾಡಿಮಿಡಿತವನ್ನು ಹೊಂದಿದ್ದಾರೆ" ಎಂದು ಅಭಿಪ್ರಾಯಪಟ್ಟರು.
ಅಕ್ಷತಾ ಕುಕಿ ಪ್ರತಿಕ್ರಿಯಿಸಿದ್ದು ಹೀಗೆ: "ರಾಕೇಶ್ ಅವರು ತುಂಬಾ ಅರ್ಹರು ಮತ್ತು ಆಟಕ್ಕೆ 100% ಕ್ಕಿಂತ ಹೆಚ್ಚು ನೀಡಿರುವುದರಿಂದ ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ಅವರು ಮನೆಯಲ್ಲಿ ಅತ್ಯಂತ ಅರ್ಹ ಅಭ್ಯರ್ಥಿ."
BBK OTT ಕನ್ನಡ ಮನೆಯ ನಗುಮುಖದ ಹುಡುಗಿ, ಸ್ಪೂರ್ತಿ ಗೌಡ, "ರೂಪೇಶ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಅವರು ಪ್ರಬಲ ಸ್ಪರ್ಧಿಯಾಗಿದ್ದು, ಒಳ್ಳೆಯ ಮನುಷ್ಯನೂ ಆಗಿದ್ದಾರೆ. ರಾಕೇಶ್ ಅವರು ಟಿ ತಂತ್ರದೊಂದಿಗೆ ತಮ್ಮ ಆಟವನ್ನು ಬಹಳ ಚುರುಕಾಗಿ ಆಡುತ್ತಿರುವುದರಿಂದ ವಿಜೇತರಾಗಬೇಕೆಂದು ನಾನು ಹಾರೈಸುತ್ತೇನೆ" ಎಂದು ಹೇಳಿದರು.
ವಿಜೇತರ ಕುರಿತು ಸ್ಪರ್ಧಿಗಳು ತಮ್ಮ ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ OTT ಕನ್ನಡದ ಮೊದಲ ಸೀಸನ್‌ನ ಯಾರು ಗೆಲ್ಲುತ್ತಾರೆಂದು ನೀವು ಭಾವಿಸುತ್ತೀರಿ? ತಿಳಿದುಕೊಳ್ಳಲು @voot ಗೆ ಟ್ಯೂನ್ ಮಾಡಿ!
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.