



ಬಿಹಾರ : ಬಿಹಾರದ ಆರೋಗ್ಯ ಇಲಾಖೆಯು ಪಾಟ್ನಾದ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (IGIMS) ಇಂದು ಹೊಸ ಒಮಿಕ್ರಾನ್ ಕೊವಿಡ್-19 ರೂಪಾಂತರವನ್ನು ಪತ್ತೆ ಮಾಡಿದೆ.ರೂಪಾಂತರ BA.2. 12 BA.2ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ಭಾರತದಲ್ಲಿ ಕೊರೋನಾ ಮೂರನೇ ಅಲೆಯ ಸಮಯದಲ್ಲಿ ಈ ಹೊಸ ಕೊವಿಡ್ ವೈರಸ್ ಪ್ರಕರಣ ಪತ್ತೆಯಾಗಿದೆ. BA.2.12 ರೂಪಾಂತರವನ್ನು ಮೊದಲು ಅಮೆರಿಕಾದಲ್ಲಿ ಕಂಡುಹಿಡಿಯಲಾಯಿತು. ದೆಹಲಿಯಲ್ಲಿ ಒಟ್ಟು ಐದು ಬಿಎ.2.12 ಪ್ರಕರಣಗಳು ಪತ್ತೆಯಾಗಿದ್ದು, ಈಗ ಪಾಟ್ನಾದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.ಏಪ್ರಿಲ್ 23ರಂದು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ COVID-19 ನ BA.2.12 ರೂಪಾಂತರ ಕಾಣಿಸಿಕೊಂಡಿತ್ತು. ಇದು ಕೊವಿಡ್ ವೈರಸ್‌ನ ಒಮಿಕ್ರಾನ್ ರೂಪಾಂತರಕ್ಕಿಂತ (BA.2) ಹೆಚ್ಚು ವೇಗವಾಗಿ ಹರಡುತ್ತದೆ. BA.2.12 ಒಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.