



ಕಾರ್ಕಳ : ಬೈಕ್ ಕಾರು ಮಧ್ಯೆ ಡಿಕ್ಕಿ ಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸೀಡ್ ಫಾರ್ಮ್ ಬಳಿ ಫೆ. ೬ ರಂದು ನಡೆದಿದೆ. ಮೂಡುಬಿದಿರೆ ಮೂಡು ಮಾರ್ನಾಡಿನ ತಂಡ್ರಕೆರೆ ಹೊಲಜಾಲ್ ಬೈಲ್ ದಿನೇಶ್ ಗೌಡ (೩೨) ಮೃತಪಟ್ಟವರು . ಕಾರ್ಕಳದಿಂದ ಮೂಡುಬಿದರೆಯ ಕಡೆಗೆ ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಮೂಡಬಿದ್ರೆಯಿಂದ ಕಾರ್ಕಳ ಕಡೆಗೆ ರಾಜೀವ್ ಎಂಬುವವರ ಚಲಾಯಿಸುತ್ತಿದ್ದ ಕಾರಿನ ಮಧ್ಯೆ ಅಫಘಾತ ಸಂಭವಿಸಿದೆ . ಅಫಘತದ ಪರಿಣಾಮ ಬೈಕ್ ಸವಾರನಿಗೆ ತೀವ್ರವಾದ ಪೆಟ್ಟಾಗಿತ್ತು . ಚಿಕಿತ್ಸೆಗಾಗಿ ತಕ್ಷಣವೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ . ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.