logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯಿಂದ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ರ್ತಿ ಅವರ ಜನ್ಮ ದಿನಾಚರಣೆ

ಟ್ರೆಂಡಿಂಗ್
share whatsappshare facebookshare telegram
3 Oct 2021
post image

ಉಡುಪಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯು ಇಂದು ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ವತಿಯಿಂದ ಜರಗಿತು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಎಲ್ಲೂರುರವರು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರು ಮಹಾತ್ಮಾ ಗಾಂಧಿಯವರ ತತ್ವಾದರ್ಶಗಳನ್ನು ಓರ್ವ ವ್ಯಕ್ತಿ, ಒಂದು ಸಂಸ್ಥೆ, ಒಂದು ಪಕ್ಷ ಪಾಲಿಸಿಕೊಂಡು ಬಂದರೆ ಜೀವನ ಪಾವನವಾಗಲು ಬೇರೇನೂ ಬೇಕಾಗಿಲ್ಲ. ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವ ಜನಮನ್ನಣೆಗಳಿಸಿ ದೇಶಕ್ಕೆ ಸ್ವಾತಂತ್ರ್ಯ ಒದಗಿಸಿಕೊಟ್ಟಿತು ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ ಅವರು ಬರೇ 17 ತಿಂಗಳು ಪ್ರಧಾನ ಮಂತ್ರಿಯಾಗಿದ್ದರೂ ಕೂಡಾ ಶಾಶ್ವತವಾಗಿ ಅವರ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ತಾನು ಉಪವಾಸವಿದ್ದು ಜನತೆಗೊದಗಿದ ಸಂಕಷ್ಟ ತೊಲಗಿಸಿಕೊಳ್ಳಲು ಒಂದು ದಿನದ ಊಟ ತ್ಯಜಿಸಿ ಎಂದು ಜನರಿಗೆ ಭೋದಿಸಿದ್ದರು ಎಂದು ತಿಳಿಸಿದರು.

ದೇಶದ ಪಿತಾಮಹಾ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಬಗ್ಗೆ ಶ್ರೇಷ್ಟ ವಾಗ್ಮಿ, ಚಿಂತಕ, ಬರಹಗಾರ ಶ್ರೀ ಕೆಂಚನೂರು ಪ್ರದೀಪ್ ಶೆಟ್ಟಿಯವರು ದಿಕ್ಸೂಚಿ ಭಾಷಣ ಮಾಡಿ, ಇವರಿಬ್ಬರ ಮಾರ್ಗದರ್ಶನ ಶ್ರೇಷ್ಟವಾದದ್ದು. ಗಾಂಧಿ ವಿಚಾರಧಾರೆಗಳು ಕಿವುಡು ಬ್ರಿಟೀಷ್ ಸರಕಾರವನ್ನು ತೊಲಗಿಸುವಂತೆ ಮಾಡಿತು, ನಮಗೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿಯವರ ವ್ಯಕ್ತಿತ್ವ, ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿತ್ತು. ಹಾಗಾಗಿ ಗಾಂಧೀಜಿ ಗ್ರಾಮ ಸ್ವರಾಜ್ಯ ಕನಸು ನನಸಾಯ್ತು ಎಂದರು. ಇದನ್ನು ಮುಂದುವರಿಸಿಕೊಂಡು ಹೋಗುವ ಶಕ್ತಿ ನಮಗೆ ಇರಬೇಕು ಎಂದರು. ಪಾಕಿಸ್ತಾನವನ್ನು ಯುದ್ಧದ ಮೂಲಕ ಸೋಲಿಸಿದ ಕೀರ್ತಿ ಲಾಕ್ ಬಹದ್ದೂರ್ ಶಾಸ್ತ್ರಿಯವರಿಗೆ ಸಲ್ಲುತ್ತದೆ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯಂತೆ ಮಾಜಿ ಯೋಧ ಬಾಲಕೃಷ್ಣ ಭಂಡಾರಿ ಎಲ್ಲೂರು ಹಾಗೂ ಪ್ರಗತಿಶೀಲ ಮಾದರಿ ಕೃಷಿಕ ಸತೀಶ್ ಶೆಟ್ಟೆ ಯಡ್ತಾಡಿ ಇವರನ್ನು ಸನ್ಮಾನಿಸಿ, ಗೌರವಿಸಲಾಯ್ತು. ಹೊಸದಾಗಿ ಆಯ್ಕೆಯಾದ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪದಗ್ರಹಣ ನಡೆದು ಆದೇಶ ಪತ್ರ ನೀಡಲಾಯಿತು. ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷರ ಶೇಖರ್ ಕೆ. ಕೋಟ್ಯಾನ್ ವಂದಿಸಿದರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ. ಅಣ್ಣಯ್ಯ ಸೇರಿಗಾರ್ ಮತ್ತು ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಪುತ್ರನ್, ನವೀನ್‍ಚಂದ್ರ ಜೆ. ಶೆಟ್ಟಿ, ಹರೀಶ್ ಕಿಣಿ, ಬಿ. ನರಸಿಂಹ ಮೂರ್ತಿ, ನೀರೆ ಕೃಷ್ಣ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕುಶಲ್ ಶೆಟ್ಟಿ ಇಂದ್ರಾಳಿ, ಪ್ರಶಾಂತ್ ಜತ್ತನ್ನ, ಕೇಶವ ಕೋಟ್ಯಾನ್, ಹಬೀಬ್ ಆಲಿ, ಬಿಪಿನ್ ಚಂದ್ರಪಾಲ್, ಡಾ. ಸುನೀತಾ ಶೆಟ್ಟಿ, ಭುಜಂಗ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಉದ್ಯಾವರ ನಾಗೇಶ್ ಕುಮಾರ್, ಫಾ| ವಿಲಿಯಂ ಮಾರ್ಟಿಸ್, ದಿನಕರ್ ಹೇರೂರು, ನವೀನ್‍ಚಂದ್ರ ಸುವರ್ಣ, ರಮೇಶ್ ಕಾಂಚನ್, ಪ್ರವೀಣ್ ಶೆಟ್ಟಿ, ಕಿಶೋರ್ ಎರ್ಮಾಳ್, ಯತೀಶ್ ಕರ್ಕೇರ, ಚಂದ್ರಿಕಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಸುರೈಯಾ ಅಂಜುಮ್, ಉದಯ ಹೇರೂರು, ಪ್ರಕಾಶ್ ಪೂಜಾರಿ ಕೆರ್ವಾಶೆ, ರಾಯ್ ಮರ್ವಿನ್ ಫೆರ್ನಾಂಡಿಸ್, ಉದಯ ಶೆಟ್ಟಿ ಕಾರ್ಕಳ, ನಾಗಪ್ಪ ಕೊಟ್ಟಾರಿ ವಂಡ್ಸೆ, ರಾಜೇಶ್ ದೇವಾಡಿಗ, ಗೋವರ್ದನ್ ಜೋಗಿ, ಮಾಧವ ಗಾಣಿಗ, ಭಾಸ್ಕರ್ ಶೆಟ್ಟಿ, ಹರೀಶ್ ಶೆಟ್ಟಿ ಕೀಳಿಂಜೆ, ಸದಾನಂದ ಶೆಟ್ಟಿ. ರಾಘವೇಂದ್ರ ನಾಯಕ್, ರಶ್ಮಿತ, ಗಿಲ್ಬರ್ಟ್ ಡಿ’ಸೊಜಾ, ಕಿರ್ತನ್ ಕುವೆಲ್ಲೋ, ಸೋಮಯ್ಯ ಕಾಂಚನ್, ಲಕ್ಷ್ಮಣ ಮಟ್ಟು, ಎ. ಅಹಮ್ಮದ್, ಹಮದ್ ಮೊದಲಾದವರು ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.