



ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ಸಂಭಾಷಣಾಕಾರ,ನಟ ಮತ್ತು ನಿರ್ಮಾಪಕ.ಪವನ್ ಒಡೆಯರ್ ರವರ ಹುಟ್ಟಿದ ದಿನ. 1987 ಡಿಸೆಂಬರ್ 10ರಂದು ಕುಣಿಗಲ್‌ನಲ್ಲಿ ಜನಿಸಿದ ಪವನ್ ,ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಪಡೆದು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತಿದ್ದವರು. ಸಿನಿಮಾದ ಸೆಳೆತದಿಂದ ಚಿತ್ರರಂಗದತ್ತ ಮುಖಮಾಡಿ, ಯೋಗರಾಜ್ ಭಟ್ ಅವರ ಜೊತೆ ಪಂಚರಂಗಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಸಿನಿ ಜರ್ನಿಗೆ ಎಂಟ್ರಿ ಕೊಟ್ಟರು..
ನಂತರ ನಟಸಾರ್ವಭೌಮ, ಪುಷ್ಪಕ ವಿಮಾನ, ರೆಮೋ ಭಾರತೀಯ ಪನೋರಮದಿಂದ ಸನ್ಮಾನಿಸಲ್ಪಟ್ಟ ಜನಪದ ಚಿತ್ರ ಡೊಳ್ಳು ಹೀಗೆ ಯಶಸ್ವಿ ಸಿನೆಮಾಗಳಲ್ಲಿ ನಿರ್ದೇಶನ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಛಾಪು ಮೂಡಿಸಿದರು.ಒಡೆಯರ್ ಮೂವೀಸ್ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡ ಚಿತ್ರರಂಗದ ಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿದ್ದಾರೆ ಪವನ್ ಒಡೆಯರ್... ಚಿತ್ರರಂಗದ ಸೆಳೆತದಲ್ಲಿ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 10ರಂದು ಪವನ್ ಹುಟ್ಟುಹಬ್ಬದ ದಿನವೇ ಪುತ್ರ ಶೌರ್ಯ ನ ಹುಟ್ಟಿದ ದಿನ ಎರಡೂ ಡಬಲ್ ಧಮಾಕ , ಅವರು ಪೇಸ್ ಬುಕ್ ನಲ್ಲಿ ತನ್ನ ಮಗುವಿನ ಚಿತ್ರ ಚಿತ್ರವನ್ನು ಹಂಚಿಕೊಂಡಿದ್ದಾರೆ. Suddisanchalana.com ತಂಡದ ಪರವಾಗಿ ಶೌರ್ಯ , ಹಾಗು ಪವನ್ ಒಡೆಯರ್ ಇಬ್ಬರಿಗೂ ಹುಟ್ಟಿದ ದಿನದ ಶುಭಾಶಯಗಳು....
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.