



ಕುಂದಾಪುರ: ಕುಂದಾಪುರ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರ ಪರವಾಗಿ ಶನಿವಾರ ಕುಂದಾಪುರ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಯಿತು.ಸಾವಿರಾರು ಕಾರ್ಯಕರ್ತರು ಬಿಜೆಪಿ ಹಾಗೂ ಕೇಸರಿ ಧ್ವಜ ಹಿಡಿದ ರೋಡ್ ಶೋನಲ್ಲಿ ಹೆಜ್ಜೆ ಹಾಕಿದರು. ಕುಂದಾಪುರ ನೆಹರು ಮೈದಾನದಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣದ ಮುಖಾಂತರ ತಿರುಗಿ ಮತ್ತೆ ಶಾಸ್ತ್ರೀ ವೃತ್ತದಲ್ಲಿ ಸಮಾಪನಗೊಂಡಿತು.
ಬಜರಂಗದಳ ನಿಶೇಧದ ವಿರುದ್ಧ ಸಂಘಟನೆಗಳ ವಿರೊಧದ ಕೂಗು ಮರೆವಣಿಗೆಯಲ್ಲಿ ಕೇಳಿಬಂತು.
ಕುಂದಾಪುರ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಈ ವೇಳೆ ಜೊತೆಗಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.