



ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಈಗ ಬಿಜೆಪಿಯ ಬಾಗಿಲು ತೆರೆದಿದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ ಎಂದು ಉಡುಪಿ ಬಿಜೆಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಉಡುಪಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮೋದ್ ಸೇರ್ಪಡೆಗೆ ನಾನು ವಿರೋಧ ವ್ಯಕ್ತಪಡಿಸಿದ್ದು ನಿಜ. ನಾನು ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾರಣ, ನನ್ನ ಸ್ಥಾನಕ್ಕೆ ಕುತ್ತು ಬರಬಹುದೆಂಬ ನಿಟ್ಟಿನಿಂದ ಸ್ವಭಾವಿಕವಾಗಿ ವಿರೋಧ ಮಾಡಿದ್ದೇನು. ಆಗಲೂ ಪಕ್ಷಕ್ಕೆ ಸೇರ್ಪಡೆಗೆ ನನ್ನ ಅಭ್ಯಂತರ ಇರಲಿಲ್ಲ. ಆದರೆ, ಅಭ್ಯರ್ಥಿ ಮಾಡುವುದಕ್ಕೆ ನನ್ನ ವಿರೋಧ ಇತ್ತು ಎಂದು ತಿಳಿಸಿದ್ದಾರೆ.
ಬೇರೆ ಪಕ್ಷದ ನಾಯಕನ ಆಗಮನದಿಂದ ಪಕ್ಷ ಬಲವರ್ಧನೆ ಆಗುತ್ತದೆ ಎಂದಾದರೆ ನನಗೆ ಸಂತೋಷವೇ. ಈಗ ನನ್ನ ಬುಡ ಗಟ್ಟಿಯಾಗಿದೆ. ಯಾವುದೇ ನಾಯಕರ ಸೇರ್ಪಡೆಗೆ ನಾನು ವಿರೋಧ ಮಾಡಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾರೆ ಸ್ವಾಗತ ಎಂದರು.
ಎಲ್ಲ ಶಾಸಕರು ಪಕ್ಷದ ಜೊತೆಗೆ ಅವರ ಬುಡ ಗಟ್ಟಿ ಮಾಡಲು ನೋಡುವುದು ಸಹಜ..ಅದರಲ್ಲಿ ಎರಡು ಮಾತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.